alex Certify
ಕನ್ನಡ ದುನಿಯಾ       Mobile App
       

Kannada Duniya

ದಮಯಂತಿಯಾಗ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ

ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡೋಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಬರ್ತಿದ್ದಾರೆ. ಈಗಾಗ್ಲೇ ಕನಸುಗಾರ ರವಿಚಂದ್ರನ್ ಜೊತೆ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ರಾಧಿಕಾ ಬಣ್ಣ ಹಚ್ಚಿದ್ದು ಚಿತ್ರ ತೆರೆಗೆ ಬರಬೇಕಿದೆ. ಅಲ್ಲದೇ ಕಾಂಟ್ರ್ಯಾಕ್ಟ್ ಚಿತ್ರದಲ್ಲೂ ರಾಧಿಕಾ ಅಭಿನಯಿಸುತ್ತಿದ್ದಾರೆ.

ಇದರ ಜೊತೆಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ಅಭಿನಯಿಸೋದಕ್ಕೂ ರಾಧಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ದಮಯಂತಿ ಹೆಸರಿನ ವುಮೆನ್ ಓರಿಯಂಟೆಡ್ ಚಿತ್ರದಲ್ಲಿ ರಾಧಿಕಾ ಬಣ್ಣ ಹಚ್ಚಲು ರೆಡಿಯಾಗಿದ್ದಾರಂತೆ.

ಕೆಲ ವರ್ಷಗಳಿಂದ ಸ್ಯಾಂಡಲ್ವುಡ್ ನಿಂದ ಮರೆಯಾಗಿಬಿಟ್ಟಿದ್ದ ನಟಿ ರಾಧಿಕಾ ಈಗ ಮತ್ತೆ ತೆರೆ ಮೇಲೆ ಬರುವ ಪ್ರಯತ್ನ ಆರಂಭಿಸಿದ್ದಾರೆ. ಹಲವು ಸಿನಿಮಾಗಳ ಕತೆಗಳನ್ನ ಅವರು ಓಕೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಇತ್ತೀಚೆಗಷ್ಟೆ ಮಗಳು ಶಮಿಕಾ ಜೊತೆ ವಿದೇಶದಲ್ಲಿ ಮೆಟ್ರೊ ರೈಲಿನಲ್ಲಿ ಸಂಚರಿಸಿದ ರಾಧಿಕಾ ಕುಮಾರಸ್ವಾಮಿಯವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...