alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ರಂಗದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು…?

ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡ್ತಾರಾ….? ಎಂಬುದು ಹಲವರ ಕುತೂಹಲ. ಇದಕ್ಕೆ ಸ್ವತಃ ರಾಧಿಕಾ ಕುಮಾರಸ್ವಾಮಿಯವರೇ ಉತ್ತರ ನೀಡಿದ್ದು, ಮಗಳಿಗೆ ಇಷ್ಟವಿದ್ದರೆ ಅವಳನ್ನು ರಾಜಕೀಯ ರಂಗಕ್ಕೆ ತರುವುದಾಗಿ ತಿಳಿಸಿದ್ದಾರೆ.

ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಮಗಳು ಶಮಿಕಾ ರಾಜಕೀಯಕ್ಕೆ ಬರಲು ಇಚ್ಚಿಸಿದರೆ ಅವಳಿಗೆ ಬೆಂಬಲಿಸುವುದಾಗಿ ರಾಧಿಕಾ ಹೇಳಿದ್ದಾರೆ. ಮಗಳು ಬೆಳೆದ ನಂತರ ಅವಳ ನಿರ್ಧಾರವೇ ಪ್ರಮುಖವಾಗಿದ್ದು, ಅವಳು ಏನಾಗಬೇಕೆಂದು ಇಚ್ಛಿಸುತ್ತಾಳೋ ಅದಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯ ಮಗಳಿಗೆ ನೃತ್ಯದಲ್ಲಿ ಆಸಕ್ತಿ ಇದ್ದು, ಮುಂದೆ ಅವಳು ಓದಿನಲ್ಲಿಯೇ ಆಸಕ್ತಿ ಹೊಂದಿ, ಶೈಕ್ಷಣಿಕವಾಗಿ ಮುಂದುವರೆಯುತ್ತೇನೆ ಎಂದರೆ ಅದಕ್ಕೂ ತಮ್ಮ ಬೆಂಬಲವಿದೆ. ಇಲ್ಲ ಸಿನಿಮಾ ರಂಗಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿ, ಹಿರೋಯಿನ್ ಆಗುತ್ತೇನೆ ಎಂದು ಆಶಿಸಿದರೆ ನಾನೇ ಅವಳಿಗಾಗಿ ಸಿನಿಮಾವನ್ನು ನಿರ್ಮಿಸುತ್ತೇನೆ. ಒಂದು ವೇಳೆ ಅವಳು ರಾಜಕೀಯದಲ್ಲಿ ಆಸಕ್ತಿ ತೋರಿದರೆ ನಾನು ಅದಕ್ಕೂ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಬಾಲ ನಟಿಯಾಗಿ ಪರಿಚಯಿಸುತ್ತಿರಾ ಎಂಬ ಪ್ರಶ್ನೆಗೆ ಸಧ್ಯಕ್ಕೆ ಅವಳನ್ನು ಸಿನಿಮಾ ರಂಗಕ್ಕೆ ತರುವ ಯೋಚನೆಯಿಲ್ಲ. ಯಾಕೆಂದರೆ ಶಮಿಕಾ ಇನ್ನೂ ಚಿಕ್ಕವಳು. ಅವಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕಿರುವುದು ಮುಖ್ಯ. ಮುಂದೆ ಭವಿಷ್ಯದಲ್ಲಿ ಒಳ್ಳೆಯ ಸಬ್ಜೆಕ್ಟ್ ಬಂದರೆ ಆಗ ಅವಳಿಗೋಸ್ಕರ ನಮ್ಮ ಬ್ಯಾನರ್ ನಲ್ಲೇ ಚಿತ್ರ ಮಾಡುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...