alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಫ್ಟ್ ನಲ್ಲಿ ನಟ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದಿದ್ರು ರಾಧಿಕಾ

ರಾಧಿಕಾ ಆಪ್ಟೆ ಬಾಲಿವುಡ್ ನಟಿ. ತನ್ನ ನೇರ ಮಾತುಗಳಿಂದಲೇ ಹೆಸರು ವಾಸಿಯಾದವರು. ಚಿತ್ರರಂಗದಲ್ಲಿ ತಾವು ಅನುಭವಿಸಿದ ಕಿರುಕುಳದ ಕಥೆಗಳನ್ನು ಈ ಮೊದಲು ಹೇಳಿದ್ದ ರಾಧಿಕಾ, ಈಗ ಹೊಸ ಸ್ಟೋರಿ ರಿವೀಲ್ ಮಾಡಿದ್ದಾರೆ.

ಹೌದು….ಚಿತ್ರೋದ್ಯಮದಲ್ಲಿ ಹೆಣ್ಣು ಮಕ್ಕಳ ಜೊತೆ ಕೆಲ ನಟ, ನಿರ್ದೇಶಕ, ನಿರ್ಮಾಪಕರು ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ಮಾತು ಇದೆ. ಇದಕ್ಕೆ ಹಲವು ನಿದರ್ಶನಗಳು ಸಿಕ್ಕಿವೆ. ರಾಧಿಕಾ ಈಗ ಹೇಳಿರುವ ಕಥೆ, ಈ ಸಾಲಿಗೆ ಹೊಸ ಸೇರ್ಪಡೆ. ರಾಧಿಕಾ ಜೊತೆ ಸಹ ನಟ ಲಿಫ್ಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದನಂತೆ. ಈ ವಿಷಯವನ್ನು ರಾಧಿಕಾ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಒಂದು ಚಿತ್ರದ ಶೂಟಿಂಗ್ ವೇಳೆ ರಾಧಿಕಾಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದನ್ನು ಲೆಕ್ಕಿಸದೇ ತನಗೆ ನೀಡಿದ ಪಾತ್ರಕ್ಕೆ ನ್ಯಾಯ ನೀಡಿ, ರೂಮ್ ಗೆ ಹೊರಟಾಗ, ಸಹ ನಟನೂ ಲಿಫ್ಟ್ ನಲ್ಲಿ ಇದ್ದ. ರಾಧಿಕಾಗೆ ಈ ನಟನ ಪರಿಚಯವೂ ಇರಲಿಲ್ಲ. ಆದ್ರೆ ಲಿಫ್ಟ್ ನಲ್ಲಿ ಆತ ನಡೆದುಕೊಂಡ ರೀತಿ ಕಿರಿಕಿರಿ ಉಂಟು ಮಾಡಿದೆ. ನಿಮಗೆ ಏನಾದ್ರೂ ಸಹಾಯ ಬೇಕಿದ್ರೆ ಕೇಳಿ, ಮಧ್ಯರಾತ್ರಿಯಾದ್ರೂ ಚಿಂತೆಯಿಲ್ಲ ಬಂದು ನಿಮಗೆ ಸೊಂಟ ಮಸಾಜ್ ಮಾಡುವೇ ಎಂದು ಹೇಳಿದ್ದಾನೆ ಎಂದು ರಾಧಿಕಾ ತಿಳಿಸಿದ್ದಾರೆ. ಈ ವಿಷಯವನ್ನು ಚಿತ್ರದ ಯೂನಿಟ್ ಬಳಿ ಪ್ರಸ್ತಾಪಿಸಿದಾಗ ಸಹ ನಟ ಬಂದು ಕ್ಷಮೆ ಕೇಳಿದ್ದ ಎಂದು ರಾಧಿಕಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...