alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ರಾಧೇ ಮಾ

radhe-maaವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದ ಸ್ವಯಂ ಘೋಷಿತ ದೇವ ಮಹಿಳೆ ರಾಧೇ ಮಾ ಕಳೆದ ಕೆಲ ದಿನಗಳಿಂದ ತಣ್ಣಗಿದ್ದರು. ಈಗ ರಾಧೇ ಮಾ ಕುರಿತ ಹೊಸ ಸುದ್ದಿಯೊಂದು ಬಹಿರಂಗವಾಗಿದ್ದು, ವೆಬ್ ಸಿರೀಸ್ ಒಂದಕ್ಕೆ ರಾಧೇ ಮಾ ಬಣ್ಣ ಹಚ್ಚುತ್ತಿದ್ದಾರಂತೆ.

ಈ ಹಿಂದೆ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ನಲ್ಲಿ ರಾಧೇ ಮಾ ಕಾಣಿಸಿಕೊಳ್ಳಲಿದ್ದಾರೆಂಬ ರೂಮರ್ ಹಬ್ಬಿತ್ತಾದರೂ ಸ್ವತಃ ರಾಧೇ ಮಾ ಅದಕ್ಕೆ ಫುಲ್ ಸ್ಟಾಪ್ ಹಾಕಿದ್ದರು. ತುಂಡುಡುಗೆಯಲ್ಲಿದ್ದ ರಾಧೇ ಮಾ ಡ್ಯಾನ್ಸ್ ವಿಡಿಯೋ ಕೂಡಾ ವೈರಲ್ ಆಗಿತ್ತು.

ಈ ಎಲ್ಲಾ ವಿವಾದಗಳಿಂದ ಹೊರ ಬಂದು ಹೊಸ ಇಮೇಜ್ ಸೃಷ್ಟಿಸಿಕೊಳ್ಳಲು ಮುಂದಾಗಿರುವ ರಾಧೇ ಮಾ, ರಮಣ್ ಹಂಡಾ ನಿರ್ಮಾಣದ ವೆಬ್ ಸಿರೀಸ್ ನಲ್ಲಿ ಅಭಿನಯಿಸುತ್ತಿದ್ದಾರಂತೆ. ರಾಧೇ ಮಾರ ಆಶ್ರಮದಲ್ಲಿಯೇ ಇದಕ್ಕೆ ಸೆಟ್ ಹಾಕಲಾಗಿದ್ದು, ಅನುಯಾಯಿಗಳಿಗೆ ಪ್ರವಚನ ನೀಡುವ ಪಾತ್ರದಲ್ಲಿ ರಾಧೇ ಮಾ ಕಾಣಿಸಿಕೊಳ್ಳಲಿದ್ದಾರೆನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...