alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮರ್’ ಜೊತೆಯಾಗ್ತಾರಾ ಬುಲ್ ಬುಲ್ ಬೆಡಗಿ…?

ಬುಲ್ ಬುಲ್ ಬೆಡಗಿ ರಚಿತಾ ರಾಮ್ ದಿನದಿಂದ ದಿನಕ್ಕೆ ಸ್ಯಾಂಡಲ್ ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಿದ್ದಾರೆ. ಅಯೋಗ್ಯ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ರಚಿತಾ, ನಿಖಿಲ್ ಕುಮಾರ್ ಸ್ವಾಮಿ ಜೊತೆಗಿನ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.

ಇದರ ನಡುವೆ ಬುಲ್ ಬುಲ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದಿದ್ದಿದೆ. ರೆಬೆಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಭಿನಯಿಸ್ತಿರೋ ಅಮರ್ ಸಿನಿಮಾದಲ್ಲಿ ರಚಿತಾ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ ಅನ್ನೋ ಗುಸುಗುಸು ಗಾಂಧಿನಗರದಿಂದ ಕೇಳಿಬರ್ತಿದೆ.

ಸ್ಪೆಷಲ್ ಸಾಂಗ್ ಒಂದರಲ್ಲಿ ರಚಿತಾ ರಾಮ್ ಸ್ಪೆಷಲ್ ಎಂಟ್ರಿ ಇರಲಿದೆ ಅಂತ ಮೂಲಗಳು ಹೇಳ್ತಿದೆ. ಅಂಬರೀಷ್ ಪುತ್ರ ಅಭಿಷೇಕ್ ಅವರ ಡೆಬ್ಯು ಸಿನಿಮಾದಲ್ಲಿ ಸೆಲೆಬ್ರಿಟಿಯಾಗಿಯೇ ರಚಿತಾ ರಾಮ್ ಬಣ್ಣ ಹಚ್ಚುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ರಚಿತಾ ಈ ವಿಚಾರ ನಿಜವೋ ಸುಳ್ಳೋ ಅನ್ನೋದನ್ನ ಖಚಿತಪಡಿಸಿಲ್ಲ. ಆದ್ರೆ ಚಿತ್ರತಂಡ ಮಾತ್ರ ಸ್ಪೆಷಲ್ ರೋಲ್ಗಾಗಿ ರಚಿತಾರನ್ನು ಅಪ್ರೋಚ್ ಮಾಡಿದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...