alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲುಗೆ ಅಭಿನಂದಿಸಲು ಹೋಗಿ ಯಡವಟ್ಟು ಮಾಡಿಕೊಂಡ ಹಾಲಿವುಡ್ ನಟ

ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ನಟನೆಯ ‘ಕ್ರೀಡ್ 2’ ಚಿತ್ರ ಸದ್ಯದಲ್ಲೇ ಸೆಟ್ಟೇರ್ತಿದೆ. ಸ್ಟಾಲೋನ್ ಗೆ ಆಲ್ ದಿ ಬೆಸ್ಟ್ ಹೇಳಿರೋ ನಟ ಸಲ್ಮಾನ್ ಖಾನ್, ವಿಡಿಯೋ ಒಂದನ್ನು ಶೇರ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲೋನ್ ಕೂಡ ಸಲ್ಮಾನ್ ಅಭಿನಯದ ರೇಸ್3 ಚಿತ್ರಕ್ಕೆ ಶುಭ ಹಾರೈಸಿದ್ದರು. ಪ್ರತಿಭಾವಂತ ನಟ ಸಲ್ಮಾನ್ ಖಾನ್ ಗೆ ಮುಂದಿನ ಚಿತ್ರ ರೇಸ್ 3ಗಾಗಿ ಆಲ್ ದಿ ಬೆಸ್ಟ್ ಅಂತಾ ಬರೆದು ಪೋಸ್ಟರ್ ಒಂದನ್ನು ಶೇರ್ ಮಾಡಿದ್ರು.

ಆದ್ರೆ ಅದು ಸಲ್ಮಾನ್ ಖಾನ್ ಪೋಸ್ಟರ್ ಅಲ್ಲ. ನಟ ಬಾಬಿ ಡಿಯೋಲ್ ರ ರೇಸ್ 3 ಪೋಸ್ಟರ್. ಹಾಗಾಗಿ ಸ್ಟಾಲೋನ್ ಗೆ ಸಲ್ಮಾನ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಆದ್ರೆ ಸಲ್ಮಾನ್ ಖಾನ್ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಬಾಬಿ ಡಿಯೋಲ್ ರೇಸ್ 3 ಚಿತ್ರದ ಪ್ರಮುಖ ನಟ ಅಂತಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಾಬಿ ಡಿಯೋಲ್ ಕೂಡ ರಿಯಾಕ್ಟ್ ಮಾಡಿದ್ದಾರೆ.

ರೇಸ್ 3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಶಾ ಹಾಗೂ ಜಾಖ್ವೆಲಿನ್ ಫರ್ನಾಂಡಿಸ್ ನಟಿಸಲಿದ್ದಾರೆ. ರೆಮೊ ಡಿಸೋಜಾ ಈ ಚಿತ್ರದ ನಿರ್ದೇಶಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...