alex Certify
ಕನ್ನಡ ದುನಿಯಾ       Mobile App
       

Kannada Duniya

ರೇಸ್-3 ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಭಾಗಿಯಾದ ಕೂಲ್ ಧೋನಿ

ಬಾಲಿವುಡ್ ಬಹು ನಿರೀಕ್ಷಿತ ಚಿತ್ರ ರೇಸ್-3 ಶುಕ್ರವಾರ ತೆರೆಗೆ ಬರ್ತಿದೆ. ಈದ್ ದಿನ ಚಿತ್ರ ತೆರೆಗೆ ಬರ್ತಿದ್ದು, ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಮಂಗಳವಾರ ಸಂಜೆ ಮುಂಬೈನಲ್ಲಿ ರೇಸ್-3 ಸ್ಪೆಷಲ್ ಸ್ಕ್ರೀನಿಂಗ್ ನಡೆದಿದೆ.

ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಬಾಲಿವುಡ್ ನ ಅನೇಕ ಕಲಾವಿದರು ಪಾಲ್ಗೊಂಡಿದ್ದರು. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಕೂಡ ಸ್ಪೆಷಲ್ ಸ್ಕ್ರೀನಿಂಗ್ ಗೆ ಬಂದಿದ್ದರು. ಪತ್ನಿ ಸಾಕ್ಷಿ ಜೊತೆ ಬಂದಿದ್ದ ಧೋನಿ ರೇಸ್-3 ವೀಕ್ಷಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಸೂಪರ್ ಸ್ಟಾರ್ ಮನೆ ಮುಂದೆ ಧೋನಿ ಕುಟುಂಬ ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು.

ರೇಸ್-3 ಚಿತ್ರವನ್ನು ರೆಮೋ ಡಿಸೋಜಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ಬಾಬಿ ಡಿಯೋಲ್, ಅನಿಲ್ ಕಪೂರ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ರೇಸ್-3 ಚಿತ್ರದ ಹಾಡು ಹಾಗೂ ಟ್ರೈಲರ್ ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈದ್ ಗೆ ಉಡುಗೊರೆಯಾಗಿ ಸಲ್ಮಾನ್ ರೇಸ್-3ಯನ್ನು ನೀಡ್ತಿದ್ದು ಅಭಿಮಾನಿಗಳು ಯಾವ ಪ್ರತಿಕ್ರಿಯೆ ನೀಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...