alex Certify
ಕನ್ನಡ ದುನಿಯಾ       Mobile App
       

Kannada Duniya

100 ಕೋಟಿ ಕ್ಲಬ್ ಸೇರಿದ ಆಲಿಯಾ ಭಟ್ ಚಿತ್ರ

ಆಲಿಯಾ ಭಟ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ‘ರಾಝಿ’ ಬಿಡುಗಡೆಗೊಂಡ ಮೂರು ವಾರಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.

ಬಾಲಿವುಡ್ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಈ ಕುರಿತು ಟ್ವೀಟ್ ಮಾಡಿದ್ದು, ‘ರಾಝಿ’ ಚಿತ್ರ 17 ದಿನಗಳಲ್ಲಿ 102.50 ಕೋಟಿ ರೂ.ಗಳನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

ಆಲಿಯಾ ಭಟ್, ವಿಕ್ಕಿ ಕೌಶಲ್ ಅಭಿನಯದ ‘ರಾಝಿ’ ಚಿತ್ರ ಮಹಿಳಾ ಪ್ರಧಾನ ಕತೆಯನ್ನು ಹೊಂದಿದ್ದು, ಆಲಿಯಾ ಭಟ್ ಅಭಿನಯದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಿಂದೆ ಆಲಿಯಾ ಭಟ್ ಅಭಿನಯದ 2 ಸ್ಟೇಟ್ಸ್ 102.13 ಕೋಟಿ ರೂ. ಗಳಿಸಿದ್ದರೆ, ಬಿಕೆಡಿ 116.68 ಕೋಟಿ ಗಳಿಕೆ ಮಾಡಿತ್ತು. ‘ರಾಝಿ’ ಚಿತ್ರ ಈಗಾಗಲೇ 102.50 ಕೋಟಿ ರೂ. ಗಳಿಕೆ ಮಾಡಿರುವುದಲ್ಲದೆ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾರಣ ಈ ಚಿತ್ರ ಆಲಿಯಾ ಭಟ್ ಅಭಿನಯದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಲಿದೆ. ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಆಲಿಯಾ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...