alex Certify
ಕನ್ನಡ ದುನಿಯಾ       Mobile App
       

Kannada Duniya

ಒಲಿಂಪಿಕ್ ಬೆಳ್ಳಿತಾರೆಯ ಸಿನೆಮಾಕ್ಕೆ ಸೋನು ಆ್ಯಕ್ಷನ್ ಕಟ್

590933-pv-sindhu

ಕ್ರೀಡಾಪಟುಗಳ ಸಿನೆಮಾಗಳು ಒಂದರ ಮೇಲೊಂದರಂತೆ ಥಿಯೇಟರ್ ಗೆ ಲಗ್ಗೆ ಇಡ್ತಿವೆ. ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬದುಕು ಕೂಡ ಸಿನೆಮಾ ರೂಪ ಪಡೆದುಕೊಳ್ತಿದೆ. ಸೈನಾ ಪಾತ್ರಕ್ಕಾಗಿ ನಟಿ ಶ್ರದ್ಧಾ ಕಪೂರ್ ಸಾಕಷ್ಟು ತಯಾರಿ ಮಾಡ್ತಿದ್ದಾಳೆ. ಇನ್ನೊಂದೆಡೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಪಿ.ವಿ.ಸಿಂಧು ಬಗ್ಗೆ ಕೂಡ ಬಯೋಪಿಕ್ ಬರ್ತಾ ಇದೆ.

ವಿಲನ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಸೋನು ಸೂದ್, ಸಿಂಧು ಬಯೋಪಿಕ್ ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಆದ್ರೆ ಸಿಂಧು ಪಾತ್ರಕ್ಕೆ ಯಾರು ಜೀವ ತುಂಬ್ತಾರೆ ಅನ್ನೋದು ಮಾತ್ರ ಟಾಪ್ ಸೀಕ್ರೆಟ್. ಕೋಟ್ಯಂತರ ಭಾರತೀಯರಿಗೆ ಪ್ರೇರಣೆಯಾಗಿರುವ ಸಿಂಧು ಬಗ್ಗೆ ಸಿನೆಮಾ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಅಂತಾ ಸೋನು ಸೂದ್ ಹೇಳಿದ್ದಾರೆ.

ಬ್ಯಾಡ್ಮಿಂಟನ್ ಜಗತ್ತಿನಲ್ಲಿ ತಮ್ಮ ಯಶಸ್ವಿ ಪಯಣವನ್ನು ಸಿನಿಮಾ ರೂಪದಲ್ಲಿ ತರಲು ಸೋನು ಸೂದ್ ಮುಂದಾಗಿರೋದಕ್ಕೆ ಸಿಂಧು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ 8 ತಿಂಗಳುಗಳಿಂದ ಚಿತ್ರತಂಡ ಸಿನೆಮಾಕ್ಕೆ ಬೇಕಾದ ರಿಸರ್ಚ್ ನಡೆಸುತ್ತಿದೆಯಂತೆ. ಈಗಾಗ್ಲೇ ಸ್ಕ್ರಿಪ್ಟ್ ಕೂಡ ರೆಡಿಯಾಗಿದ್ದು, ತಾರಾಗಣದ ಆಯ್ಕೆ ಮಾತ್ರ ಬಾಕಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...