alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಪ್ರಸಿದ್ಧ ಪಂಜಾಬಿ ಗಾಯಕ ಪರ್ಮೀಶ್ ವರ್ಮಾ ಮತ್ತವರ ಸ್ನೇಹಿತನ ಮೇಲೆ ಮೊಹಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ನಿನ್ನೆ ತಡರಾತ್ರಿ ಮೊಹಾಲಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಕೃತ್ಯ ನಡೆದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಇವರುಗಳು ಚಿಕಿತ್ಸೆ ಪಡೆಯುತ್ತಿದ್ದು, ದುಷ್ಕರ್ಮಿಗಳು ಪರ್ಮೀಶ್ ವರ್ಮಾರ ಮೊಣಕಾಲಿಗೆ ಗುಂಡು ಹಾರಿಸಿದ್ದರು. ಕಳೆದ ವರ್ಷ ಬಿಡುಗಡೆಯಾದ ‘ಗಾಲ್ ನಿ ಕದ್ನಿ’ ಹಾಡು ಪರ್ಮೀಶ್ ಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.

ಯುಟ್ಯೂಬ್ ನಲ್ಲಿ ಇದನ್ನು 118 ಮಿಲಿಯನ್ ಜನರು ವೀಕ್ಷಿಸಿದ್ದರು. ಗಾಯಕನ ಖ್ಯಾತಿ ಹೆಚ್ಚಿದ ಬೆನ್ನಲ್ಲೇ, ಭೂಗತ ಪಾತಕಿಗಳಿಂದ ಬೆದರಿಕೆಯೂ ಬರಲಾರಂಭಿಸಿತ್ತು. ಮೂರು ವಾರಗಳ ಹಿಂದಷ್ಟೆ ಪರ್ಮೀಶ್ ರ ಮತ್ತೊಂದು ಹಾಡು ಬಿಡುಗಡೆಯಾಗಿತ್ತು. ಪರ್ಮಿಶ್ ರ ಜನಪ್ರಿಯ ‘ಗಾಲ್ ನಿ ಕದ್ನಿ’ ಹಾಡಿನ ವಿಡಿಯೋ ಇಲ್ಲಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...