alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತ್ ಗೆ ಫುಲ್ ಮಾಕ್ಸ್ ನೀಡಿದ ಪಂಜಾಬ್ ರಜಪೂತ್

ಪಂಜಾಬ್ ರಜಪೂತ್ ಮಹಾಸಭಾ ಪದ್ಮಾವತ್ ಬಿಡುಗಡೆಗೆ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ. ಜನವರಿ 24ರಂದು ರಜಪೂತ್ ಸಮುದಾಯಕ್ಕೆ ಸೇರಿದ ಕೆಲವರು ವಿಶೇಷ ಪ್ರದರ್ಶನದಲ್ಲಿ ಪದ್ಮಾವತ್ ಚಿತ್ರ ವೀಕ್ಷಣೆ ಮಾಡಿದ್ದಾರೆ. ಜಿಲ್ಲಾಡಳಿತ ಸಂಜೆ 6ರಿಂದ 9ರವರೆಗೆ ವಿಷೇಶ ಪ್ರದರ್ಶನದ ವ್ಯವಸ್ಥೆ ಮಾಡಿತ್ತು.

ಈ ಹಿಂದೆ ಪದ್ಮಾವತ್ ಗೆ ವಿರೋದ ಮಾಡ್ತಿದ್ದ ಪಂಜಾಬ್ ರಜಪೂತ್ ಮಹಾಸಭಾ ಚಿತ್ರ ವೀಕ್ಷಣೆ ನಂತ್ರ ಫುಲ್ ಮಾಕ್ಸ್ ನೀಡಿದೆ. ಚಿತ್ರದಲ್ಲಿ ರಜಪೂತ್ ಸಮುದಾಯ ತಲೆತಗ್ಗಿಸುವಂತಹ ಯಾವುದೇ ಸನ್ನಿವೇಶವಿಲ್ಲ. ಈ ಹಿಂದೆ ನಾವು ವಿರೋಧ ಮಾಡಿದ್ದಕ್ಕೆ ಚಿತ್ರದ ನಿರ್ದೇಶಕರು 300 ದೃಶ್ಯಗಳನ್ನು ಕತ್ತರಿಸಿದ್ದಾರೆ. ಚಿತ್ರದಲ್ಲಿ ಯಾವುದೇ ಕೆಟ್ಟ ಸಂದೇಶವಿಲ್ಲ. ಹಾಗಾಗಿ ಚಿತ್ರ ಬಿಡುಗಡೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮಹಾಸಭಾ ಅಧ್ಯಕ್ಷರು ಹೇಳಿದ್ದಾರೆ.

ಉಳಿದ ಕೆಲ ರಾಜ್ಯಗಳಲ್ಲಿ ಪದ್ಮಾವತ್ ಗೆ ವಿರೋಧ ವ್ಯಕ್ತವಾಗ್ತಲೇ ಇದೆ. ರಾಜಸ್ತಾನ, ಮಧ್ಯಪ್ರದೇಶದಲ್ಲಿ ಚಿತ್ರ ತೆರೆಗೆ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...