alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಜಕುಮಾರ’ನ ನೋಡಲು ಮುಗಿಬಿದ್ದ ಫ್ಯಾನ್ಸ್

appu-ckm

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

100 ಥಿಯೇಟರ್ ಗಳಲ್ಲಿ 50 ದಿನ ಪೂರೈಸಿರುವ ‘ರಾಜಕುಮಾರ’ ಚಿತ್ರ ತಂಡದಿಂದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಯಾತ್ರೆ ಕೈಗೊಳ್ಳಲಾಗಿದೆ.

ಮೊದಲ ದಿನ ಹಾಸನ, ಚಿಕ್ಕಮಗಳೂರು ಹಾಗೂ ಮೈಸೂರಿಗೆ ಪುನೀತ್ ರಾಜ್ ಕುಮಾರ್ ಹಾಗೂ ಚಿತ್ರ ತಂಡದವರು ಭೇಟಿ ನೀಡಿದ್ದಾರೆ.

ಹಾಸನದ ಸಹ್ಯಾದ್ರಿ ಚಿತ್ರ ಮಂದಿರದ ಬಳಿ ಬೆಳಿಗ್ಗೆಯಿಂದಲೇ ಅಭಿಮಾನಿಗಳು ನೆರೆದಿದ್ದರು. ಪುನೀತ್ ರಾಜ್ ಕುಮಾರ್ ಆಗಮಿಸುತ್ತಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹಾಸನದಿಂದ ಚಿಕ್ಕಮಗಳೂರು ಮಿಲನ ಚಿತ್ರಮಂದಿರದತ್ತ ‘ರಾಜಕುಮಾರ’ನ ಸವಾರಿ ಹೊರಟಿತು. ಅಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಅಪ್ಪು ಮಾತನಾಡಿದರಲ್ಲದೇ, ‘ಗೊಂಬೆ ಹೇಳುತೈತೆ..’ ಹಾಡಿದ್ದಾರೆ. ಅಲ್ಲಿಂದ ಮೈಸೂರಿಗೆ ಹೊರಟು ಅಭಿಮಾನಿಗಳೊಂದಿಗೆ ಪುನೀತ್ ಸಿನಿಮಾ ವೀಕ್ಷಿಸಿದ್ದಾರೆ.

‘ರಾಜಕುಮಾರ’ ಸಿನಿಮಾ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಚಿತ್ರ ತಂಡ ಕೃತಜ್ಞತೆ ಸಲ್ಲಿಸಿದೆ. ನಾಳೆಯೂ ‘ರಾಜಕುಮಾರ’ನ ಯಾತ್ರೆ ಮುಂದುವರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...