alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲೀಸ್ ಆಯ್ತು ಹೊಸ ಚಿತ್ರದ ಪೋಸ್ಟರ್, ಸ್ಟೈಲಿಶ್ ಲುಕ್ ನಲ್ಲಿ ಪವರ್ ಸ್ಟಾರ್

ಹೇಗಿದೆ ಪೋಸ್ಟರ್? ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇಳಿರುವ ಪ್ರಶ್ನೆ. ಅಂದಹಾಗೇ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ‘ನಟಸಾರ್ವಭೌಮ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಮಾರ್ಚ್ 16 ರ ಮಧ್ಯರಾತ್ರಿ ‘ನಟಸಾರ್ವಭೌಮ’ ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶನದಲ್ಲಿ ‘ನಟಸಾರ್ವಭೌಮ’ ಚಿತ್ರ ಮೂಡಿ ಬರ್ತಿದೆ.

ಪುನೀತ್ ವಿಭಿನ್ನ ಹೇರ್ ಸ್ಟೈಲ್ ನಲ್ಲಿ, ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಅಭಿಮಾನಿಗಳನ್ನು ಸೆಳೆದಿದೆ. ಮಾರ್ಚ್ 19 ರಿಂದ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ‘ರಾಜಕುಮಾರ’ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಮ್ಸ್ ಬ್ಯಾನರ್ ನಲ್ಲಿ ಪುನೀತ್ ಅಭಿನಯದ ಹೊಸ ಚಿತ್ರ ಸೆಟ್ಟೇರಲಿದೆ.

ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಸಾಮಾಜಿಕ ಜಾಲತಾಣಗಳಲ್ಲಿ ‘ನಟ ಸಾರ್ವಭೌಮ’ ಚಿತ್ರದ ಪೋಸ್ಟರ್ ಹಾಕಿದ್ದು, ಅಪ್ಪು ಬರ್ತಡೇ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಖುಷಿ ತಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...