alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ಮನೆಗೆ ಭೇಟಿ ನೀಡಿದ ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಅವರಿಗೂ ಅಭಿಮಾನಿಗಳೆಂದರೆ ಅಚ್ಚುಮೆಚ್ಚು. ಸಮಯ ಸಿಕ್ಕಾಗಲೆಲ್ಲಾ ಅಭಿಮಾನಿಗಳೊಂದಿಗೆ ಕಾಲ ಕಳೆಯುತ್ತಾರೆ.

‘ಟಗರು’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊಸಪೇಟೆಗೆ ತೆರಳಿದ್ದ ಪುನೀತ್ ರಾಜ್ ಕುಮಾರ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಅಭಿಮಾನಿಯ ಮನೆಗೆ ಭೇಟಿ ನೀಡಿದ್ದಾರೆ.

ಕೋಣಯ್ಯನಹಟ್ಟಿಯಲ್ಲಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಅವರ ಮನೆಗೆ ಅಪ್ಪು ಭೇಟಿ ನೀಡಿದ್ದಾರೆ. ಮನೆಗೆ ಆಗಮಿಸಿದ ಪುನೀತ್ ಅವರಿಗೆ ಮೋಹನ್ ಕುಟುಂಬದವರು ಆರತಿ ಬೆಳಗೆ ಸ್ವಾಗತಿಸಿದ್ದಾರೆ.

ಮೋಹನ್ ಅವರು ಗೃಹಪ್ರವೇಶಕ್ಕೆ ಆಗಮಿಸುವಂತೆ ಅಪ್ಪು ಅವರನ್ನು ಆಹ್ವಾನಿಸಿದ್ದು, ಸಮಯದ ಅಭಾವದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಭಾನುವಾರ ಮೋಹನ್ ಮನೆಗೆ ಭೇಟಿ ನೀಡಿದ ಪುನೀತ್, ಕೆಲ ಸಮಯ ಅವರೊಂದಿಗೆ ಕಳೆದು, ಪ್ರಯಾಣ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...