alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಸಂಭ್ರಮದಲ್ಲಿ ‘ರಾಜಕುಮಾರ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತೆರೆಕಂಡು ಇಂದಿಗೆ 1 ವರ್ಷ. ಭರ್ಜರಿ ಯಶಸ್ಸು ಕಂಡ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು.

ಎಲ್ಲಾ ವರ್ಗದವರು ಇಷ್ಟಪಟ್ಟಿದ್ದ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ..’ ಎವರ್ ಗ್ರೀನ್ ಸಾಂಗ್ ಆಗಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಮೊದಲ ಚಿತ್ರ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಭರ್ಜರಿ ಯಶಸ್ಸು ಕಂಡಿತ್ತು. ಸಂತೋಷ್ ಆನಂದರಾಮ್ ನಿರ್ದೇಶನದ 2 ನೇ ಚಿತ್ರ ‘ರಾಜಕುಮಾರ’ ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಂಗದೂರು ನಿರ್ಮಾಣದಲ್ಲಿ ಅದ್ಧೂರಿ ವೆಚ್ಚದಲ್ಲಿ, ಅದ್ಧೂರಿ ತಾರಾಗಣದಲ್ಲಿ ಮೂಡಿಬಂದಿತ್ತು.

ಪುನೀತ್ ರಾಜ್ ಕುಮಾರ್, ವಿಜಯ್ ಕಿರಂಗದೂರು ಮತ್ತು ಸಂತೋಷ್ ಆನಂದರಾಮ್ ಅವರು ‘ರಾಜಕುಮಾರ’ ಭರ್ಜರಿ ಯಶಸ್ಸಿನ ಬಳಿಕ ಮತ್ತೊಂದು ಚಿತ್ರದಲ್ಲಿ ಜೊತೆಯಾಗಲಿದ್ದಾರೆ. ಈ ಮೂವರ ಕಾಂಬಿನೇಷನ್ ನಲ್ಲಿ ಹೊಸಚಿತ್ರ ಮೂಡಿ ಬರಲಿದೆ.

‘ರಾಜಕುಮಾರ’ ಬಿಡುಗಡೆಯಾಗಿ 1 ವರ್ಷವಾಗಿರುವ ಹಿನ್ನಲೆಯಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ಸಂತಸ ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...