alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದುವರೆದ ‘ರಾಜಕುಮಾರ’ನ ನಾಗಾಲೋಟ

rajakumara-appu

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಯಶಸ್ವಿಯಾಗಿ ಮುನ್ನಡೆದಿದೆ. 100 ದಿನಗಳ ಬಳಿಕವೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

‘ಬಾಹುಬಲಿ -2’ ನಂತಹ ಚಿತ್ರಗಳು ಬಂದರೂ ‘ರಾಜಕುಮಾರ’ನ ನಾಗಾಲೋಟ ಮುಂದುವರೆದಿದೆ. ‘ಬಾಹುಬಲಿ -2’ಗಿಂತ ಮೊದಲೇ ರಿಲೀಸ್ ಆಗಿದ್ದ ‘ರಾಜಕುಮಾರ’ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಪೀಟ್ ಆಡಿಯನ್ಸ್ ಹೆಚ್ಚಾಗುತ್ತಿದ್ದಾರೆ.

ಗಳಿಕೆಯಲ್ಲಿಯೂ ‘ರಾಜಕುಮಾರ’ ಕಮಾಲ್ ಮಾಡಿದ್ದು, ಸುಮಾರು 60 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ವಿಜಯ್ ಕಿರಗಂದೂರು ನಿರ್ಮಾಣದಲ್ಲಿ, ಸಂತೋಷ್ ಆನಂದ ರಾಮನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರಾಜಕುಮಾರ’ ಹಲವು ದಾಖಲೆ ಮಾಡಿದೆ.

ವಿ. ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಮೋಡಿ ಮಾಡಿದ್ದು, ‘ಬೊಂಬೆ ಹೇಳುತೈತೆ’ ಸಾಂಗ್ ಹೆಚ್ಚಿನವರ ಕಾಲರ್ ಟ್ಯೂನ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...