alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ಮನೆಗೆ ಅಪ್ಪು ದಿಢೀರ್ ಭೇಟಿ

ಸ್ಟಾರ್ ನಟರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನೆಚ್ಚಿನ ನಟರನ್ನು ಕಂಡ ಕೂಡಲೇ ಅಭಿಮಾನಿಗಳ ಅಭಿಮಾನ ಉಕ್ಕಿ ಹರಿಯುತ್ತದೆ. ನಟರೂ ಅಷ್ಟೇ, ವಿವಿಧ ರೀತಿಯಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.

‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಭಿಮಾನಿ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಹೊಸಪೇಟೆಯ ವಿಶ್ವ ಅವರು ಅಪ್ಪು ಅಭಿಮಾನಿಯಾಗಿದ್ದು, ಈ ಹಿಂದೆ ಸಹೋದರಿಯ ಮದುವೆಗೆ ಆಗಮಿಸುವಂತೆ ಅಪ್ಪು ಅವರನ್ನು ಆಹ್ವಾನಿಸಿದ್ದಾರೆ.

ಆದರೆ, ಪಾರ್ವತಮ್ಮ ರಾಜ್ ಕುಮಾರ್ ಅನಾರೋಗ್ಯದ ಕಾರಣದಿಂದ ಮದುವೆಯಲ್ಲಿ ಪುನೀತ್ ಭಾಗವಹಿಸಿರಲಿಲ್ಲ. ಸಂತೋಷ್ ಆನಂದರಾಮನ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುನೀತ್, ಇದೇ ವೇಳೆ ವಿಶ್ವ ಅವರ ಮನೆಗೆ ಭೇಟಿ ನೀಡಿದ್ದಾರೆ.

ಮನೆಯ ಮಹಿಳೆಯರು ಅಪ್ಪುಗೆ ಆರತಿ ಎತ್ತಿ ಬರಮಾಡಿಕೊಂಡಿದ್ದಾರೆ. ವಿಶ್ವ ಅವರ ಕುಟುಂಬದವರು, ಅಭಿಮಾನಿಗಳೊಂದಿಗೆ ಕೆಲ ಸಮಯ ಕಳೆದ ಅಪ್ಪು, ಅಲ್ಲಿಂದ ಪ್ರಯಾಣ ಮುಂದುವರೆಸಿದ್ದಾರೆ. ಅಪ್ಪು ಆಗಮನದ ಹಿನ್ನಲೆಯಲ್ಲಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...