alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ದೇವರುಗಳ ನಡುವೆ ಅಪ್ಪು ಬರ್ತಡೇ

apuu-birt

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ರಾತ್ರಿಯಿಂದಲೇ ಸಡಗರ, ಸಂಭ್ರಮ ಮನೆ ಮಾಡಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಲು ಕಾಯುತ್ತಿದ್ದರು.

ರಾತ್ರಿ 12.10 ಗಂಟೆಗೆ ಅಭಿಮಾನಿಗಳ ನಡುವೆ ಕಾಣಿಸಿಕೊಂಡ ಪುನೀತ್ ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಪಾರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಅಪ್ಪು ಅಭಿನಯದ ‘ರಾಜಕುಮಾರ’ ಚಿತ್ರದ ‘ಡ್ಯಾನ್ಸ್ ಡ್ಯಾನ್ಸ್’ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅಪ್ಪು ಡ್ಯಾನ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿದೆ.

ಆಗಮಿಸಿದ್ದ ಅಭಿಮಾನಿಗಳೊಂದಿಗೆ ಬರ್ತಡೇ ಆಚರಿಸಿಕೊಂಡ ಅಪ್ಪು, ಅಭಿಮಾನಿಗಳ ಹಾರೈಕೆ, ಆಶೀರ್ವಾದ ಹೀಗೆಯೇ ಇರಲಿ ಎಂದು ಹೇಳಿದ್ದಾರೆ.

ಬಹು ನಿರೀಕ್ಷೆಯ ಚಿತ್ರ ‘ರಾಜಕುಮಾರ’ ಬಿಡುಗಡೆಗೆ ಸಿದ್ಧವಾಗಿದೆ. ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...