alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಹಬ್ಬದಲ್ಲಿ ಅಭಿಮಾನಿಗಳ ಜೊತೆ ದೊಡ್ಮನೆ ಸಹೋದರರ ಭರ್ಜರಿ ಸ್ಟೆಪ್ಸ್

ಬೆಂಗಳೂರು: ಬೆಂಗಳೂರಿನ ಸದಾಶಿವ ನಗರ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಗಣೇಶ ಉತ್ಸವದಲ್ಲಿ ದೊಡ್ಮನೆ ಸಹೋದರರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅಭಿಮಾನಿಗಳ ಜತೆ ಡ್ಯಾನ್ಸ್ ಮಾಡಿ ಗಮನ ಸೆಳೆದರು.

ಗೌರಿ-ಗಣೇಶ ಹಬ್ಬದ ಅಂಗವಾಗಿ ನಿನ್ನೆ ಸದಾಶಿವನಗರ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ರಾತ್ರಿ ನಡೆದ ಗಣೇಶ ಮೆರವಣಿಗೆಯಲ್ಲಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘಣ್ಣ ಭಾಗವಹಿಸಿದ್ದರು. ಈ ವೇಳೆ ಅಣ್ಣಮ್ಮ ಬೀಟ್ಸ್ ಗೆ ಸಹೋದರರಿಬ್ಬರೂ ಅಭಿಮಾನಿಗಳ ಜೊತೆ ಸ್ಟೆಪ್ಸ್ ಹಾಕಿದ್ದು ವಿಶೇಷವಾಗಿತ್ತು.

ಇನ್ನು ಸ್ಯಾಂಡಲ್ ವುಡ್ ನ ಹಲವು ತಾರೆಯರ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ನಟ ಉಪೇಂದ್ರ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉಪೇಂದ್ರ ದಂಪತಿ ಒಟ್ಟಿಗೆ ಪೂಜೆ ಮಾಡಿದರು. ಜೋಗಿ ಪ್ರೇಮ್ ಮನೆಯಲ್ಲೂ ಗಣೇಶ ಸಂಭ್ರಮಾಚರಣೆ ಜೋರಾಗಿ ನಡೆದಿದ್ದು, ಪರಿಸರ ಸ್ನೇಹಿ ಗಣೇಶನಿಗೆ ರಕ್ಷಿತಾ ಪ್ರೇಮ್ ದಂಪತಿ ವಿಶೇಷ ಪೂಜೆ ನೆರವೇರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...