alex Certify
ಕನ್ನಡ ದುನಿಯಾ       Mobile App
       

Kannada Duniya

‘ಪುಲಿ’ ಚಿತ್ರ ನಿರ್ಮಾಪಕರ ವಿರುದ್ದ ಎಸ್. ನಾರಾಯಣ್ ಗರಂ

vijay_Puli_220615T

ವಿಜಯ್, ಶ್ರೀದೇವಿ, ಕಿಚ್ಚ ಸುದೀಪ್ ಅಭಿನಯದ ‘ಪುಲಿ’ ಚಿತ್ರದ ನಿರ್ಮಾಪಕರ ವಿರುದ್ದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್. ನಾರಾಯಣ್ ಗರಂ ಆಗಿದ್ದಾರೆ.

ಕರ್ನಾಟಕದಲ್ಲಿ ‘ಪುಲಿ’ ಚಿತ್ರದ ವಿತರಣೆ ಹಕ್ಕು ಪಡೆದಿದ್ದ ಎಸ್. ನಾರಾಯಣ್ ಅವರಿಗೆ ಇದರಿಂದ 4.50 ಕೋಟಿ ರೂ. ನಷ್ಟವುಂಟಾಗಿದೆ ಎನ್ನಲಾಗಿದ್ದು, ಈ ಚಿತ್ರವನ್ನು ವಿತರಣೆ ಮಾಡಿದ್ದ ಇತರೆ ವಿತರಕರಿಗೆ ನಷ್ಟ ಭರಿಸಿರುವ ನಿರ್ಮಾಪಕರು ತಮಗೆ ನೀಡದಿರುವುದು ನಾರಾಯಣ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

4 ತಿಂಗಳ ಹಿಂದೆಯೇ ಈ ಕುರಿತು ಎಸ್. ನಾರಾಯಣ್, ದಕ್ಷಿಣ ಭಾರತ ಫಿಲಂ ಛೇಂಬರ್ ಗೆ ದೂರು ನೀಡಿದ್ದು, ಇಲ್ಲಿಯವರೆಗೆ ‘ಪುಲಿ’ ಚಿತ್ರದ ನಿರ್ಮಾಪಕರು ನಾರಾಯಣ್ ಅವರನ್ನು ಸಂಪರ್ಕಿಸಿಲ್ಲವೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ನಾರಾಯಣ್ ಧರಣಿ ಮಾಡಲೂ ಹಿಂಜರಿಯುವುದಿಲ್ಲವೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...