alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ವರ್ಯ ರೈ ಅಭಿನಯದ ಚಿತ್ರಕ್ಕೆ ಎದುರಾಯ್ತು ಸಂಕಷ್ಟ

ಐಶ್ವರ್ಯ ರೈ, ಅನಿಲ್‌ ಕಪೂರ್‌ ನಟಿಸಿರುವ ಫನ್ನಿ ಖಾನ್‌ ಚಿತ್ರವನ್ನು ಬಿಡುಗಡೆ ಮಾಡದಂತೆ ಹಿಂದಿ ಚಿತ್ರ ನಿರ್ಮಾಪಕ ವಶು ಭಗ್ನಾಮಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಭಗ್ನಾಮಿ ವಕೀಲರು ಮಂಗಳವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಬುಧವಾರ ವಿಚಾರಣೆಗೆ ಬರಲಿದೆ.

ಆ.3 ರಂದು ತೆರೆ ಕಾಣಲಿದ್ದ ಚಿತ್ರವನ್ನು ದೇಶಾದ್ಯಂತ ಡಿಸ್ಟ್ರಿಬ್ಯೂಷನ್‌ ಮಾಡಲು ಭಗ್ನಾಮಿಯ ಸಂಸ್ಥೆ ಪೂಜಾ ಎಂಟರ್‌ಟೇನ್‌ಮೆಂಟ್‌ ಮತ್ತು ಫಿಲಮ್ಸ್‌ ಗೆ ನೀಡಲಾಗಿದೆ.

ಎಲ್ಲ ಚಿತ್ರಮಂದಿರಗಳಿಗೆ ನೀಡುವ ಹಕ್ಕು ಸಂಸ್ಥೆಗೆ ಮಾತ್ರವಿದ್ದು, ಈ ಸಂಬಂಧ ಚಿತ್ರದ ಸಹ ನಿರ್ಮಾಪಕ ಕ್ರಿಯಾರ್ಜ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ಜತೆ ಈ ಸಂಬಂಧ 2017 ಡಿಸೆಂಬರ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. 10 ಕೋಟಿ ರೂ. ಒಪ್ಪಂದದಲ್ಲಿ 8.50 ಕೋಟಿ ರೂ. ಈಗಾಗಲೇ ಪಾವತಿಸಲಾಗಿದೆ. ಇನ್ನುಳಿದ ಹಣವನ್ನು ಬಿಡುಗಡೆಗೆ ಕೆಲ ದಿನ ಬಾಕಿ ಇರುವ ಸಮಯದಲ್ಲಿ ನೀಡಲಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಅರ್ಜಿಯಲ್ಲಿ ತಿಳಿಸಲಾಗಿದೆ.

ಚಿತ್ರ ಬಿಡುಗಡೆ ತಡೆ ನೀಡುವಂತೆ ಮುಂಬೈ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇರುವುದಾಗಿಯೂ ಭಗ್ನಾನಿ ವಕೀಲರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...