alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಪ್ರಿಯಾಂಕ ಚೋಪ್ರಾ ಮನೆ ಫೋಟೋ

ಬಟ್ಟೆ ಹಾಗೂ ಜೀವನ ಶೈಲಿಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮತ್ತೊಮ್ಮೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ಮುಂಬೈನಿಂದ ನ್ಯೂಯಾರ್ಕ್ ಗೆ ಹಾರಿರುವ ಪ್ರಿಯಾಂಕ ಅಲ್ಲೊಂದು ಗೂಡು ಕಟ್ಟಿದ್ದಾಳೆ. ನ್ಯೂಯಾರ್ಕ್ ನಲ್ಲಿರುವ ಪ್ರಿಯಾಂಕ ಮನೆ ಫೋಟೋ ವೈರಲ್ ಆಗಿದೆ.

ಸದ್ಯ ಪ್ರಿಯಾಂಕ ಇಂಟರ್ನ್ಯಾಷನಲ್ ಶೋನಲ್ಲಿ ಪಾಲ್ಗೊಂಡಿದ್ದಾಳೆ. ಶೂಟಿಂಗ್ ನಡೆಯುತ್ತಿರುವ ಸ್ಥಳದ ಬಳಿಯೇ ಐಷಾರಾಮಿ ಅಪಾರ್ಟ್ಮೆಂಟ್ ನಲ್ಲಿ ಮನೆ ಖರೀದಿ ಮಾಡಿದ್ದಾಳೆ ಪ್ರಿಯಾಂಕ. ತನ್ನಿಷ್ಟದಂತೆ ಮನೆಯನ್ನು ವಿನ್ಯಾಸಗೊಳಿಸಿದ್ದಾಳೆ ಪಿಗ್ಗಿ. ಅಡುಗೆ ಮನೆಯಿಂದ ಹಿಡಿದು ಡ್ರಾಯಿಂಗ್ ಕೋಣೆಯವರೆಗೆ ಎಲ್ಲವನ್ನೂ ಪ್ರಿಯಾಂಕ ತಾನೇ ವಿನ್ಯಾಸ ಮಾಡಿದ್ದಾಳೆ. ಬಾಲ್ಕನಿಯಲ್ಲಿರುವ ಸುಂದರವಾದ ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸಿವೆ.

ನ್ಯೂಯಾರ್ಕ್ ಟೈಮ್ಸ್ ತನ್ನ ಪೋರ್ಟಲ್ ನಲ್ಲಿ ಪ್ರಿಯಾಂಕ ಮನೆಯ ಕೆಲ ಫೋಟೋವನ್ನು ವೈರಲ್ ಮಾಡಲಾಗಿದೆ. ಫೈವ್ ಸ್ಟಾರ್ ಹೊಟೇಲ್ ನಲ್ಲಿರುವ ಸೌಲಭ್ಯಗಳನ್ನು ಈ ಮನೆ ಹೊಂದಿದೆ. 75 ಅಡಿ ಉದ್ದದ ಈಜುಕೊಳವಿದೆ. ಸ್ಪಾ ಹಾಗೂ ಬೇಬಿ ಸಿಟ್ಟಿಂಗ್ ಸೌಲಭ್ಯ ಕೂಡ ಅಪಾರ್ಟ್ಮೆಂಟ್ ನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...