alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ಹೊಸ ಚಿತ್ರಕ್ಕೆ ಎದುರಾಗಿದೆ ವಿಘ್ನ

ಪ್ರಿಯಾಂಕಾ ಚೋಪ್ರಾ ನಟನೆ ಮತ್ತು ನಿರ್ಮಾಣದ ಮಹತ್ವಾಂಕ್ಷೆಯ ಚಿತ್ರ ನಳಿನಿಗೆ ವಿಘ್ನವೊಂದು ಎದುರಾಗಿದೆ. ಚಿತ್ರೀಕರಣಕ್ಕೆ ನೀಡಿದ್ದ ಅನುಮತಿಯನ್ನ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ರದ್ದು ಮಾಡಿದೆ.

ಸಿನಿಮಾ ಚಿತ್ರೀಕರಣದಿಂದ ವಿವಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಶಾಂತಿ ನಿಕೇತನದಲ್ಲಿ ಚಿತ್ರೀಕರಣ ನಡೆಸುವಂತಿಲ್ಲ ಅಂತ ವಿವಿ ಆಡಳಿತ ಮಂಡಳಿ ಅಧಿಕಾರಿಗಳು ಚಿತ್ರ ನಿರ್ದೇಶಕ ಉಜ್ವಲ್ ಚಟರ್ಜಿಯವರಿಗೆ ತಿಳಿಸಿದ್ದಾರೆ.  ಇದರಿಂದ ಚಿತ್ರ ತಂಡ ಭಾರೀ ಸಂಕಷ್ಟಕ್ಕೆ ಸಿಲುಕಿದೆ .

ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ದೇಶಕ, ವಿವಿ ಆಡಳಿತ ಮಂಡಳಿಯನ್ನ ಸ್ಪಷ್ಟೀಕರಣ ಕೇಳಿದ್ದಾರೆ. ಒಂದು ವರ್ಷದ ಹಿಂದೆಯೇ ಸಿನಿಮಾದ ಸ್ಕ್ರಿಪ್ಟ್ ನ್ನ ಅವರು ವಿಶ್ವವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ ಡಾಕ್ಟರ್ ಸ್ವಪ್ನಾ ದತ್ ಅವರಿಗೆ ನೀಡಿದ್ದರು. 2017ರ ಡಿಸೆಂಬರ್ನಲ್ಲಿ ಚಿತ್ರೀಕರಣಕ್ಕೆ ಅವರಿಂದ ಲಿಖಿತ ಅನುಮತಿ ಸಿಕ್ಕಿತ್ತು. ಸ್ವಪ್ನಾ ದತ್ ಅವರು ನಿಯಮಿಸಿದ್ದ ಕಮಿಟಿಯ ಮೂಲಕವೇ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗಿನ ವೈಸ್ ಚಾನ್ಸಲರ್ ಚಿತ್ರೀಕರಣಕ್ಕೆ ನೀಡಿದ್ದ ಅನುಮತಿಯನ್ನ ರದ್ದುಗೊಳಿಸಿದ್ದಾರೆ.

ನಳಿನಿ ಸಿನಿಮಾ ರಾಷ್ಟ್ರ ಕವಿ ರವೀಂದ್ರ ನಾಥ್ ಠ್ಯಾಗೂರ್ ಮತ್ತು ನಳಿನ ಅನ್ನಾ ತ್ರುಕುಂಡ್ ಅವರ ಜೀವನದ ಕತೆಯಾಧಾರಿತ ಸಿನಿಮಾ ಆಗಿದೆ. ಠ್ಯಾಗೂರ್ ಅವರ ಪ್ರೇಮಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದೆ. ಹಾಗಾಗಿಯೇ ಚಿತ್ರತಂಡಕ್ಕೆ ನೀಡಿದ್ದ ಅನುಮತಿಯನ್ನ ನಿರಾಕರಿಸಿರುವ ಸಾಧ್ಯತೆ ಇದೆ. ವಿವಿ ಆಡಳಿತ ಮಂಡಳಿ ಕೂಡ ಡ್ಯಾಕ್ಯುಮೆಂಟ್ರಿ ಚಿತ್ರೀಕರಣವಾಗಿದ್ದರೆ ನಮ್ಮ ಅಭ್ಯಂತರವೇನು ಇಲ್ಲ. ಆದ್ರೆ ಇದು ಕಮರ್ಷಿಯಲ್ ಸಿನಿಮಾ ಆದ್ದರಿಂದ ಚಿತ್ರೀಕರಣಕ್ಕೆ ಅನುಮತಿ ಸಾಧ್ಯವಿಲ್ಲ ಅಂತ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...