alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಡ್ರೆಸ್ ನ ಈ ಜಾಗದಲ್ಲಿದೆ ತೂತು…!

ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಸ್ಟೈಲ್ ವಿಚಾರದಲ್ಲಿ ಎರಡು ಹೆಜ್ಜೆ ಮುಂದಿದ್ದಾಳೆ. ಆಕೆ ಸ್ಟೈಲ್ ಹಾಗೂ ಆಕೆ ಮಾತು ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಧರಿಸಿದ್ದ ಸ್ಕರ್ಟ್ ಹಾಗೂ ಸೂಟ್ ಬಿಸಿಬಿಸಿ ಚರ್ಚೆಗೆ ಬಂದಿದೆ. ಟ್ವೀಟರ್ ಬಳಕೆದಾರರು ಆಕ್ಟಿವ್ ಆಗಿದ್ದಾರೆ. ಬೇರೆ ಬೇರೆ ಜೋಕ್ ಗಳು ಕೇಳಿ ಬರ್ತಿವೆ.

ಪ್ರಿಯಾಂಕ ಚೋಪ್ರಾ ವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿದ ಡ್ರೆಸ್ ಧರಿಸಿದ್ದರು. ಸೂಟ್ ನಲ್ಲಿದ್ದ ಎರಡು ತೂತುಗಳು ಈ ಚರ್ಚೆಗೆ ಕಾರಣವಾಗಿದೆ. ಎದೆ ಭಾಗದ ಎರಡು ಕಡೆ ಡ್ರೆಸ್ ಕತ್ತರಿಸಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಪ್ರಿಯಾಂಕ ಡ್ರೆಸ್ ಏಲಿಯನ್ಸ್ ಗೆ ಹೋಲಿಸುತ್ತಿದ್ದಾರೆ.

ಪ್ರಿಯಾಂಕ ಡ್ರೆಸ್ ವಿವಾದಕ್ಕೆ ಕಾರಣವಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಪಿಗ್ಗಿ ಡ್ರೆಸ್ ಆಡುವವರ ಬಾಯಿಗೆ ಆಹಾರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ವೇಳೆ ಪ್ರಿಯಾಂಕ ಧರಿಸಿದ್ದ ಬಟ್ಟೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಬಾಲಿವುಡ್ ಗೆ ವಾಪಸ್ ಆಗಿದ್ದಾಳೆ. ಸಲ್ಮಾನ್ ಖಾನ್ ಜೊತೆ ಭಾರತ್ ಚಿತ್ರದಲ್ಲಿ ಪ್ರಿಯಾಂಕ ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...