alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ ನಟಿ ಪ್ರಿಯಾಂಕಾ ಸಹೋದರ

priyanka-brotherಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಸದ್ಯ ಹಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ‘ಕ್ವಾಂಟಿಕೋ’ ದ್ವಿತೀಯ ಸರಣಿಯ ಚಿತ್ರೀಕರಣಕ್ಕಾಗಿ ಪ್ರಿಯಾಂಕಾ ನ್ಯೂಯಾರ್ಕ್ ನಲ್ಲಿದ್ದು, ಇತ್ತ ಭಾರತದಲ್ಲಿ ಅವರ ಸಹೋದರ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಸಹೋದರ ಸಿದ್ದಾರ್ಥ್ ಚೋಪ್ರಾ ಕಾರಣಕ್ಕಾಗಿ ಈ ಹಿಂದೆ ಪ್ರಿಯಾಂಕಾ ಚೋಪ್ರಾ ಕೂಡಾ ತೊಂದರೆಗೆ ಸಿಲುಕಿಕೊಂಡಿದ್ದರು. ಮುಂಬೈನ ಪ್ರತಿಷ್ಟಿತ ಪ್ರದೇಶವೊಂದರಲ್ಲಿದ್ದ ಪ್ರಿಯಾಂಕಾರ ಬಂಗಲೆಯನ್ನು ಸಿದ್ದಾರ್ಥ್, ಸ್ಪಾ ನಡೆಸಲು ಬಾಡಿಗೆಗೆ ನೀಡಿದ್ದು, ಆದರೆ ಅಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಇದ್ಯಾವುದಕ್ಕೂ ಸಂಬಂಧವಿಲ್ಲದಿದ್ದರೂ ಪ್ರಿಯಾಂಕಾ ಸಂಕಷ್ಟಕ್ಕೊಳಗಾಗುವಂತಾಗಿತ್ತು.

ಇದೀಗ ಪ್ರಿಯಾಂಕಾ ಸಹೋದರ ಪುಣೆಯಲ್ಲಿ ಹೊಂದಿದ್ದ ‘ದಿ ಮಗ್ ಶಾಟ್ ಲೌಂಜ್’ ನಲ್ಲಿ ಅಕ್ರಮವಾಗಿ ಹುಕ್ಕಾ ಸೇವನೆ ನಡೆಯುತ್ತಿದ್ದ ಕಾರಣ ದಾಳಿ ನಡೆಸಿರುವ ಪೊಲೀಸರು ರೆಸ್ಟೋರೆಂಟ್ ಮಾಲೀಕ ಸಿದ್ದಾರ್ಥ್ ಚೋಪ್ರಾ ಹಾಗೂ ಮ್ಯಾನೇಜರ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಕ್ಕಾ ಬಾರ್ ಗೆ ಅನುಮತಿ ಇಲ್ಲದಿದ್ದರೂ ನಿಯಮಬಾಹಿರವಾಗಿ ಇಲ್ಲಿ ಅದಕ್ಕೆ ಅವಕಾಶ ನೀಡಲಾಗಿತ್ತೆನ್ನಲಾಗಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಈ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...