alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಚಿತ್ರದಲ್ಲಿ ಫರ್ಹಾನ್ ಜೊತೆ ಪಿಗ್ಗಿ

ದೀರ್ಘ ಸಮಯದ ನಂತ್ರ ಮತ್ತೆ ದೇಸಿ ಗರ್ಲ್ ಬಾಲಿವುಡ್ ಗೆ ವಾಪಸ್ ಆಗ್ತಿದ್ದಾಳೆ. ಬೆಡಗಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಚಿತ್ರಗಳಿಗೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾಳೆ. ಪ್ರಿಯಾಂಕ ಇನ್ಸ್ಟ್ರಾಗ್ರಾಮ್ ಪೋಸ್ಟ್ ಒಂದು ಇದ್ರ ಸುಳಿವು ನೀಡಿದೆ. ಪ್ರಿಯಾಂಕ ಸದ್ಯ ಭಾರತ್ ಚಿತ್ರದಲ್ಲಿ ನಟಿಸಲಿದ್ದಾಳೆ.

ಸಲ್ಮಾನ್ ಖಾನ್ ಜೊತೆ ಭಾರತ್ ನಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದು ಚಿತ್ರದ ಶೂಟಿಂಗ್ ಜುಲೈ 17ರಿಂದ ಶುರುವಾಗಲಿದೆ. ಭಾರತ್ ಜೊತೆ ಪಿಗ್ಗಿ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾಳೆಂಬ ಸುದ್ದಿಯಿದೆ. ವರದಿ ಪ್ರಕಾರ ಪ್ರಿಯಾಂಕ, ನಿರ್ದೇಶಕಿ ಸೋನಾಲಿ ಬೋಸ್ ಜೊತೆ ಕೆಲಸ ಮಾಡಲಿದ್ದಾಳಂತೆ.

ಮಾಧ್ಯಮಗಳ ವರದಿ ಪ್ರಕಾರ ಪ್ರಿಯಾಂಕ ಜೊತೆ ಫರ್ಹಾನ್ ಅಖ್ತರ್ ಕೆಲಸ ಮಾಡಲಿದ್ದಾರೆ ಎನ್ನಲಾಗ್ತಿದೆ. ಪ್ರಿಯಾಂಕ ದೆಹಲಿ ಮೂಲದ ಸ್ಪೂರ್ತಿದಾಯಕ ಉಪನ್ಯಾಸಕಿ ಹಾಗೂ ಇಮ್ಯುನೋ ಡಿಫಿಸಿಯೆನ್ಸ್ ನಿಂದ ಬಳಲುತ್ತಿರುವ ಆಯೆಶಾ ಚೌಧರಿ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ವರ್ಷ ಆಗಸ್ಟ್ ನಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...