alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಕ್ ಕೊಮಾದಲ್ಲಿ ಪ್ರಿಯಾಂಕ ಧರಿಸಿದ್ದ ಡ್ರೆಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ

ಪ್ರಿಯಾಂಕ ಚೋಪ್ರಾ ಕೂಲೆಸ್ಟ್ ಹಾಗೂ ಸ್ಟೈಲಿಶ್ ನಟಿಯರಲ್ಲಿ ಒಬ್ಬಳು. ದೇಸಿ ಗರ್ಲ್ ಪ್ರಿಯಾಂಕ ತೊಟ್ಟ ಬಟ್ಟೆ, ಮಾಡಿದ ಸ್ಟೈಲ್ ಫಾಷನ್ ಜಗತ್ತನ್ನು ಸೆಳೆಯುತ್ತದೆ. ಪ್ರಿಯಾಂಕ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು.

ತಾಯಿ ಹಾಗೂ ಸಹೋದರನ ಜೊತೆ ಪ್ರಿಯಾಂಕ ಲೇಕ್ ಕೊಮೊದಲ್ಲಿ ಸಮಯ ಕಳೆಯುತ್ತಿದ್ದಾಳೆ. ಪ್ರಿಯಾಂಕ ಲೇಕ್ ಕೊಮೊದಲ್ಲಿ ತೊಟ್ಟಿರುವ ಡ್ರೆಸ್ ಗಳು ಈಗ ಚರ್ಚೆಯ ವಿಷ್ಯವಾಗಿವೆ. ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದ ಸಾರಿ ನಂತ್ರ Como Cathedralಗೆ ಭೇಟಿ ನೀಡಿದ್ದ ಪ್ರಿಯಾಂಕ ಹಳದಿ ಬಣ್ಣದ ಡ್ರೆಸ್ ತೊಟ್ಟಿದ್ದಳು. ಆಕೆಯ ಹಳದಿ ಬಣ್ಣದ ಡ್ರೆಸ್ ಬೆಲೆ ಕೇಳಿದ್ರೆ ನೀವು ದಂಗಾಗ್ತಿರಾ. ಪಿಗ್ಗಿ ತೊಟ್ಟಿದ್ದ ಡ್ರೆಸ್ 497 ಡಾಲರ್ ( ಸುಮಾರು 36,000 ರೂಪಾಯಿ). ಇನ್ನು ಆಕೆ ಧರಿಸಿದ್ದ Far suede ಚಪ್ಪಲಿ ಬೆಲೆ 31 ಸಾವಿರ ರೂಪಾಯಿ.

ಹಳದಿ ಡ್ರೆಸ್ ತೊಟ್ಟು ಆಕರ್ಷಕವಾಗಿ ಕಾಣ್ತಿದ್ದ ಪ್ರಿಯಾಂಕ ಚೋಪ್ರಾ ಲೇಕ್ ಕೊಮೊ ಮಿಲನ್ ಫ್ಯಾಷನ್ ವೀಕ್ ನಲ್ಲಿ  ಪಾಲ್ಗೊಂಡಿದ್ದಳು. ಇದಲ್ಲದೆ ಪ್ರಿಯಾಂಕಾಳ ಇನ್ನೊಂದು ಡ್ರೆಸ್ ಕೂಡ ಚರ್ಚೆಯ ಸಂಗತಿಯಾಗಿದೆ. Dolce and Gabbana ಡ್ರೆಸ್ ನಲ್ಲಿ ಮಿಂಚಿದ್ದ ಪ್ರಿಯಾಂಕ ಡ್ರೆಸ್ ಬೆಲೆ  1,80,750 ರೂಪಾಯಿಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...