alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹ್ನವಿ ಕಪೂರ್ ಮೇಲೆ ಹೀಗೆ ಪ್ರೀತಿ ವ್ಯಕ್ತಪಡಿಸಿದ ಪ್ರಿಯಾಂಕ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಸದ್ಯ ಸ್ಕೈ ಈಸ್ ಪಿಂಕ್  ಚಿತ್ರದ ಶೂಟಿಂಗ್ ನಲ್ಲಿ  ಬ್ಯುಸಿಯಿದ್ದಾಳೆ. ಚಿತ್ರದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಗುರುವಾರ ಪ್ರಿಯಾಂಕ ಚೋಪ್ರಾ ದಿವಂಗತ ತಂದೆ ಅಶೋಕ್ ಚೋಪ್ರಾ ಹುಟ್ಟುಹಬ್ಬವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಮುಂಬೈನ ಪ್ರಸಿದ್ಧ ರೆಸ್ಟೋರೆಂಟ್ ಗೆ ತಾಯಿ ಜೊತೆ ಬಂದಿದ್ದಳು.

ರೆಸ್ಟೋರೆಂಟ್ ನಲ್ಲಿ ತಾಯಿ ಜೊತೆ ತಂದೆ ನೆನಪಿನ ಕೇಕ್ ಕತ್ತರಿಸಿದ್ರು ಪ್ರಿಯಾಂಕ. ರೆಸ್ಟೋರೆಂಟ್ ನಿಂದ ಹೊರ ಬರುವ ವೇಳೆ ಪ್ರಿಯಾಂಕ ಜೊತೆ ನಟಿ ಜಾಹ್ನವಿ ಕಪೂರ್ ಕೂಡ ಇದ್ಲು. ಈ ವೇಳೆ ಪ್ರಿಯಾಂಕ, ತನ್ನ ಸಹೋದರಿಯಂತೆ ಜಾಹ್ನವಿಗೆ ಪ್ರೀತಿ ತೋರಿಸಿದ್ದಾಳೆ. ಇಬ್ಬರು ತಬ್ಬಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹ್ನವಿಯನ್ನು ಕಾರಿನವರೆಗೆ ಬಿಟ್ಟು ಬಂದ ಪ್ರಿಯಾಂಕ, ತುಂಬಾ ಪ್ರೀತಿ ತೋರಿಸಿದ್ದಾಳೆ. ಸದ್ಯ ಜಾಹ್ನವಿ ಧಡಕ್ ಮುಗಿಸಿದ್ದು, ಕರಣ್ ಜೋಹರ್ ಚಿತ್ರ ತಖ್ತ್ ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಕರೀನಾ ಕಪೂರ್, ಅನಿಲ್ ಕಪೂರ್ ಜೊತೆ ನಟಿಸಲಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...