alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ಗೊತ್ತಾ ಪ್ರಿಯಾಂಕಾಳ ಮದುವೆ ಇನ್ವಿಟೇಷನ್…?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಸದ್ದು ತಣ್ಣಗಾಗುತ್ತಿದ್ದಂತೆ ಈಗ ಮತ್ತೊಂದು ಬಾಲಿವುಡ್ ನಟಿಯ ಮದುವೆಯ ಸುದ್ದಿ ಸದ್ದು ಮಾಡಲಾರಂಭಿಸಿದೆ. ಅಂದಹಾಗೆ ಜೋಡಿ ಬೇರಾವುದೂ ಅಲ್ಲ….ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ ನಿಕ್ ಜೋನಾಸ್.

ಸದ್ಯ ತಾಯಿ ಮಧು ಚೋಪ್ರಾ ಜೊತೆ ಪ್ಯಾರಿಸ್‍ ನಲ್ಲಿ ಮದುವೆ ಶಾಪಿಂಗ್‍ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ, ಆ ಬಿಡುವಿನ ನಡುವೆಯೇ ತಮ್ಮ ಮದುವೆಯ ಆಮಂತ್ರಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ವಿಶೇಷ ಎಂದರೆ ಬಾಕ್ಸ್ ನಂತಹ ಈ ಮದುವೆ ಕಾರ್ಡ್ ಒಳಗೆ ಅವರು ಲಾಡು ಬದಲು ಮಕರೂನ್(ಬಿಸ್ಕತ್‍ನಂಥ ಸಿಹಿ) ಇರಿಸಿದ್ದಾರೆ.

ದೀಪಿಕಾ ಮತ್ತು ಪ್ರಿಯಾಂಕಾ ಪ್ರತಿಸ್ಪರ್ಧಿ ಎಂಬಂತೆ ಬಾಲಿವುಡ್‍ನಲ್ಲಿ ಬಿಂಬಿತವಾಗಿದ್ದು, ಉದ್ದೇಶಪೂರ್ವಕವೋ ಅಥವಾ ಕಾಕತಾಳೀಯವೋ ಎಂಬಂತೆ ಇಬ್ಬರ ಮಧ್ಯೆ ಎಲ್ಲದರಲ್ಲೂ ಸ್ಪರ್ಧೆ ನಡೆದುಕೊಂಡು ಬಂದಿದೆ. ಇದೀಗ ಮದುವೆ ವಿಷಯದಲ್ಲೂ ಹೆಚ್ಚೂ ಕಡಿಮೆ ಹಾಗೇ ಆಗುವ ಲಕ್ಷಣಗಳು ಗೋಚರಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...