alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ಬೀದಿಯಲ್ಲೇ ಸಹನಟನಿಗೆ ಮುತ್ತಿಟ್ಲು ಪ್ರಿಯಾಂಕಾ

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಚಿತ್ರ ವೀಕ್ಷಕರ ಮನ ಗೆದ್ದಿರುವ ಪ್ರಿಯಾಂಕಾ ಈಗ ಅಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನೆಲೆಯೂರುವ ಸಿದ್ದತೆಯಲ್ಲಿದ್ದಾರೆ. ಈ ಮಧ್ಯೆ ಸಹ ನಟರೊಬ್ಬರಿಗೆ ನ್ಯೂಯಾರ್ಕ್ ಬೀದಿಯಲ್ಲಿ ಪ್ರಿಯಾಂಕಾ ಕಿಸ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಾಗೆಂದು ಪ್ರಿಯಾಂಕಾ ರಿಯಲ್ ಆಗಿ ಕಿಸ್ ಮಾಡಿಲ್ಲ. ಬದಲಾಗಿ ತಮ್ಮ ಕ್ವಾಂಟಿಕೋ ಸೀರಿಯಲ್ ನ 3 ನೇ ಸರಣಿಯ ದೃಶ್ಯವೊಂದಕ್ಕಾಗಿ ಸಹ ನಟ ಅಲೆನ್ ಪೋವೆಲ್ ಗೆ ಪ್ರಿಯಾಂಕಾ ಚೋಪ್ರಾ ಕಿಸ್ ಕೊಟ್ಟಿದ್ದಾರೆ.

‘ಕ್ವಾಂಟಿಕೋ’ ದ ಎರಡು ಸರಣಿಗಳು ಈಗಾಗಲೇ ಭಾರೀ ಯಶಸ್ಸು ಗಳಿಸಿದ್ದು, ಮೂರನೇ ಸರಣಿಯ ಚಿತ್ರೀಕರಣ ಭರದಿಂದ ಸಾಗಿದೆ. ಇದರ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪ್ರಿಯಾಂಕಾ, ಚಿತ್ರೀಕರಣದ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...