alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಹೆರಲು ಪ್ರಿಯಾಂಕಾಗೆ ಇದು ಸಮಸ್ಯೆಯಂತೆ…!

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಸದ್ಯ ‘ಕ್ವಾಂಟಿಕೊ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಈ ಚಿತ್ರದ ಶೂಟಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಅಂತರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಪಿಗ್ಗಿ ಮದುವೆ, ಮಕ್ಕಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾಳೆ.

ರೋಮ್ಯಾನ್ಸ್ ಮಾಡುವುದು ಪ್ರಿಯಾಂಕಾಗೆ ಇಷ್ಟವಂತೆ. ಇದನ್ನು ಪ್ರಿಯಾಂಕ ಗಂಭೀರವಾಗಿ ತೆಗೆದುಕೊಂಡಿದ್ದಾಳಂತೆ. ಅನೇಕ ದಿನಗಳಿಂದ ಸಿಂಗಲ್ ಆಗಿರುವ ನಾನು ಇದ್ರ ಬಗ್ಗೆ ಸರಿಯಾಗಿ ಉತ್ತರ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ.

ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಪ್ರಿಯಾಂಕ ಈ ಎರಡು ಗಂಭೀರ ವಿಷ್ಯ. ಮದುವೆ, ಕುಟುಂಬ, ಮಕ್ಕಳ ಮೇಲೆ ನನಗೆ ನಂಬಿಕೆಯಿದೆ. ನನಗೆ ತುಂಬಾ ಮಕ್ಕಳು ಬೇಕು. ಆದ್ರೆ ನಾನು ಅಷ್ಟೊಂದು ಮಕ್ಕಳನ್ನು ಯಾರ ಜೊತೆ ಪಡೆಯಲಿ ಎಂಬುದೇ ನನ್ನ ಸಮಸ್ಯೆ ಎಂದು ಪ್ರಿಯಾಂಕ ಹೇಳಿದ್ದಾಳೆ.

ಮದುವೆ ಬಗ್ಗೆ ಮನೆಯಲ್ಲಿ ಯಾವುದೇ ಒತ್ತಾಯವಿಲ್ಲ. ನನಗೆ ಸೂಕ್ತವೆನಿಸುವ ವ್ಯಕ್ತಿ ಜೊತೆ ಜೀವನ ನಡೆಸುತ್ತೇನೆಂದು ಪ್ರಿಯಾಂಕ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...