alex Certify
ಕನ್ನಡ ದುನಿಯಾ       Mobile App
       

Kannada Duniya

‘ಭಾರತ್’ ಗೆ ಗುಡ್ ಬೈ ಹೇಳಿ ಹೊಸ ಚಿತ್ರಕ್ಕೆ ಸಹಿ ಹಾಕಿದ ಪ್ರಿಯಾಂಕ…!

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ‘ಭಾರತ್’ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾಳೆ. ಇದು ಸದ್ಯ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು ಹೊರ ಬಂದಿದೆ. ಭಾರತ್ ಚಿತ್ರದಿಂದ ಹೊರ ಬಂದಿರುವ ಪ್ರಿಯಾಂಕ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾಳೆ.

ಪ್ರಿಯಾಂಕ ಫರ್ಹಾನ್ ಅಕ್ತರ್ ಚಿತ್ರ ‘ದಿ ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ನಟಿಸಲಿದ್ದಾಳೆ. ಆಗಸ್ಟ್ 8 ರಿಂದ ಚಿತ್ರದ ಶೂಟಿಂಗ್ ಮುಂಬೈನಲ್ಲಿ ಶುರುವಾಗಿದೆ. ವರದಿಯೊಂದರ ಪ್ರಕಾರ ಫರ್ಹಾನ್ ಅಕ್ತರ್ ಮೂಲಗಳು ಈ ಬಗ್ಗೆ ಸ್ಪಷ್ಟಪಡಿಸಿವೆ. ಪ್ರಿಯಾಂಕ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ನಟಿಸಲಿದ್ದಾರೆ. ಆಗಸ್ಟ್ 8ರಿಂದ ಶೂಟಿಂಗ್ ನಡೆಯಲಿದೆ. ಭಾರತ್ ಹಾಗೂ ದಿ ಸ್ಕೈ ಈಸ್ ಪಿಂಕ್ ಎರಡೂ ಚಿತ್ರಗಳಲ್ಲಿ ಪ್ರಿಯಾಂಕ ಒಟ್ಟಿಗೆ ನಟಿಸಬೇಕಿತ್ತು. ಆದ್ರೀಗ ನಮ್ಮ ಚಿತ್ರದಲ್ಲಿ ಮಾತ್ರ ಪ್ರಿಯಾಂಕ ನಟಿಸಲಿದ್ದಾರೆ. ಮದುವೆ ಬಗ್ಗೆ ಪ್ರಿಯಾಂಕ ಚಿತ್ರತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಚಿತ್ರದ ಮೂಲಗಳು ಹೇಳಿವೆ.

ಅಲಿ ಅಬ್ಬಾಸ್ ಚಿತ್ರ ಬಿಡಲು ಮದುವೆಯಲ್ಲ, ಪಾತ್ರ ಮುಖ್ಯ ಕಾರಣ ಎಂದು ಮೂಲಗಳು ಹೇಳಿವೆ. ಸಲ್ಮಾನ್ ಖಾನ್ ಚಿತ್ರದಲ್ಲಿ ಪ್ರಿಯಾಂಕ ಪಾತ್ರಕ್ಕೆ ಹೆಚ್ಚು ಮಹತ್ವವಿಲ್ಲ. ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ಪ್ರಿಯಾಂಕ ಲೀಡ್ ರೋಲ್ ನಲ್ಲಿ ಕಾಣಿಸಲಿದ್ದಾಳೆ. ಇದೇ ಕಾರಣಕ್ಕೆ ಪ್ರಿಯಾಂಕ ಭಾರತ್ ಕೈ ಬಿಟ್ಟಿದ್ದಾಳೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...