alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ದೇಶದಲ್ಲಿ ನಡೆಯಲಿದೆ ಪ್ರಿಯಾಂಕ ಮದುವೆ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ನಿಶ್ಚಿತಾರ್ಥವಾಗಿದೆ. ಅನೇಕ ದಿನಗಳ ಕಾಲ ನಿಕ್ ಜೊತೆ ಸಂಬಂಧದಲ್ಲಿದ್ದ ಪ್ರಿಯಾಂಕ ಎಲ್ಲರ ಮುಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಮುಂಬೈನಲ್ಲಿ ಆಗಸ್ಟ್ 18ರಂದು ನಿಕ್-ಪ್ರಿಯಾಂಕ ಎಂಗೇಜ್ಮೆಂಟ್ ಪದ್ಧತಿಯಂತೆ ನಡೆದಿದೆ. ನಂತ್ರ ಸಂಜೆ ಭರ್ಜರಿ ಪಾರ್ಟಿ ನೀಡಿ ಎಂಗೇಜ್ಮೆಂಟ್ ಸುದ್ದಿಯನ್ನು ಅಧಿಕೃತಗೊಳಿಸಿದ್ದಾಳೆ ಪಿಗ್ಗಿ.

ಎಂಗೇಜ್ಮೆಂಟ್ ನಂತೆಯೇ ಮದುವೆಯನ್ನು ಕೂಡ ವಿಶೇಷವಾಗಿ ಮಾಡಿಕೊಳ್ಳುವ ಆಸೆ ನಿಕ್ –ಪ್ರಿಯಾಂಕಾರದ್ದು. ಮದುವೆಯ ಪ್ರತಿ ಕ್ಷಣದ ಸುದ್ದಿ ಹಾಗೂ ಫೋಟೋ ಮಾಧ್ಯಮಗಳ ಕೈಗೆ ಸೇರೋದು ಇಬ್ಬರಿಗೂ ಇಷ್ಟವಿಲ್ಲವಂತೆ. ಹಾಗಾಗಿ ಮದುವೆಯನ್ನು ಭಾರತದಿಂದ ಹೊರಗೆ ಮಾಡಿಕೊಳ್ಳಲು ಜೋಡಿ ಮುಂದಾಗಿದೆ.

ಮಾಧ್ಯಮಗಳ ವರದಿ ಪ್ರಕಾರ, ಇಬ್ಬರೂ ಸುಂದರ ಹವಾಯಿ ದ್ವೀಪದಲ್ಲಿ ಮದುವೆಯಾಗಲಿದ್ದಾರಂತೆ. ನಿಕ್ ಗೆ ಈ ದ್ವೀಪ ತುಂಬಾ ಇಷ್ಟವಂತೆ. ನಿಕ್ Five 0 ಮತ್ತು Jumanji ಚಿತ್ರದ ಶೂಟಿಂಗ್ ಇಲ್ಲಿಯೇ ಮಾಡಿದ್ದಾರೆ. ಸಮುದ್ರ ಕಿನಾರೆಯಲ್ಲಿ ಮದುವೆಯಾಗುವುದು ಪ್ರಿಯಾಂಕ ಆಸೆ. ಅಕ್ಟೋಬರ್ ನಲ್ಲಿ ಮದುವೆ ನಡೆಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲ್ಲ ಸಿದ್ಧತೆ ಸದ್ದಿಲ್ಲದೆ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...