alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಪ್ರಿಯಾಂಕ ಚೋಪ್ರಾ ಇನ್ನೊಂದು ಮುಖ

priyanka

ಪ್ರವಾಸೋದ್ಯಮಕ್ಕೆ ಅಸ್ಸಾಂ ರಾಜ್ಯ ಫೇಮಸ್. ಇದೀಗ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಅಸ್ಸಾಂ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ರಾಯಭಾರಿಯಾಗಲು ಒಪ್ಪಿರುವ ಪ್ರಿಯಾಂಕ 2 ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೊದಲು ಕ್ರಿಕೆಟ್ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ರಾಯಭಾರಿಯಾಗಲು ಆಹ್ವಾನಿಸಲಾಗಿತ್ತು ಎಂದು ಅಸ್ಸಾಂ ಪ್ರವಾಸೋದ್ಯಮ ಖಾತೆ ಸಚಿವ ಹಿಮಾಂತ್ ಬಿಸ್ವ್ ಶರ್ಮಾ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಒಪ್ಪದ ಕಾರಣ, ಪ್ರಿಯಾಂಕ ಚೋಪ್ರಾ ಅವರಿಗೆ ಆಹ್ವಾನ ನೀಡಿದ್ದು, ಅವರು ಸಂಭಾವನೆ ಪಡೆಯದೇ ಉಚಿತವಾಗಿ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಚಿತ್ರೀಕರಣ ಮತ್ತು ಜಾಹೀರಾತು ವೆಚ್ಛವನ್ನು ಮಾತ್ರ ಭರಿಸಲಿದ್ದು, ಪ್ರಿಯಾಂಕ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಉಚಿತವಾಗಿ ರಾಯಭಾರಿಯಾಗಲು ಪ್ರಿಯಾಂಕ ಒಪ್ಪಿರುವುದು ವಿಶೇಷವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...