alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ತಾಯಿಯನ್ನು ಹುಚ್ಚಿ ಎಂದಿತ್ತು ಬಾಲಿವುಡ್, ಕಾರಣ ಗೊತ್ತಾ?

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಬ್ಯಾನರ್ ಅಡಿಯಲ್ಲಿ ಮೊದಲ ಭೋಜ್ಪುರಿ ಚಿತ್ರ ಮಾಡಲು ಹೊರಟಾಗ ಚಿತ್ರರಂಗದ ಸದಸ್ಯರು ಯಾವ ರೀತಿ ಅವಹೇಳನ ಮಾಡಿದ್ದರು ಅನ್ನೋದನ್ನು ತಾಯಿ ಮಧು ಚೋಪ್ರಾ ಬಹಿರಂಗಪಡಿಸಿದ್ದಾರೆ.

2015ರಲ್ಲಿ ಪ್ರಿಯಾಂಕಾ ‘ಪರ್ಪಲ್ ಪೆಬ್ಬಲ್ ಪಿಕ್ಚರ್ಸ್’ ಎಂಬ ಪ್ರೊಡಕ್ಷನ್ ಬ್ಯಾನರ್ ಆರಂಭಿಸಿದ್ರು. 2016ರಲ್ಲಿ ಪ್ರಿಯಾಂಕಾ ಬ್ಯಾನರ್ ನ ‘ಬಮ್ ಬಮ್ ಬೋಲ್ ರಹಾ ಹೈ ಕಶಿ’ ಎಂಬ ಭೋಜ್ಪುರಿ ಚಿತ್ರ ಬಿಡುಗಡೆಯಾಗಿತ್ತು.

ಚಿತ್ರ ಬಿಡುಗಡೆಗೂ ಮುನ್ನ ಪ್ರಿಯಾಂಕಾ ಸಹೋದ್ಯೋಗಿಗಳೆಲ್ಲ ಮಧು ಚೋಪ್ರಾ ನಿರ್ಧಾರವನ್ನು ಟೀಕಿಸಿದ್ರು. ನಿನ್ನ ತಾಯಿಗೇನು ಹುಚ್ಚಾ? ಭೋಜ್ಪುರಿ ಚಿತ್ರ ನಿನ್ನ ಬ್ರಾಂಡ್ ಹಾಳು ಮಾಡುತ್ತದೆ ಎಂದಿದ್ದರಂತೆ. ಆದ್ರೆ ಹಣ ಮಾಡುವುದು ಮಾತ್ರ ನಮ್ಮ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ ಮಧು ಚೋಪ್ರಾ.

ಒಳ್ಳೆಯ ಕಥಾ ವಸ್ತುವನ್ನಿಟ್ಟುಕೊಂಡು ಪ್ರಾದೇಶಿಕ ಚಿತ್ರ ಮಾಡಿದ್ರೆ ಪ್ರೇಕ್ಷಕರು ಬಂದೇ ಬರ್ತಾರೆ ಅನ್ನೋದು ಅವರ ವಿಶ್ವಾಸ. ಪ್ರಿಯಾಂಕಾ ಬ್ಯಾನರ್ ಅಡಿಯಲ್ಲಿ ಈವರೆಗೆ 9 ಚಿತ್ರಗಳು ನಿರ್ಮಾಣವಾಗಿವೆಯಂತೆ. ಯಾವುದೂ ಬಾಲಿವುಡ್ ಸಿನೆಮಾ ಅಲ್ಲ.

ಅಸ್ಸಾಮೀ, ಮರಾಠಿ, ಪಂಜಾಬಿ, ಸಿಕ್ಕಿಮೀಸ್ ಹೀಗೆ ಬೇರೆ ಬೇರೆ ಭಾಷೆಯ ಸಿನೆಮಾಗಳನ್ನು ನಿರ್ಮಾಣ ಮಾಡಲಾಗಿದೆ. ಆಯಾ ಪ್ರದೇಶದ ಜನರಿಗೂ ವೇದಿಕೆ ಕಲ್ಪಿಸಿಕೊಡ್ತಿದ್ದಾರೆ ಪ್ರಿಯಾಂಕಾ ಚೋಪ್ರಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...