alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಸಲ್ಲು ಸಹೋದರಿಯೊಂದಿಗಿನ ಪ್ರಿಯಾಂಕಾ ಭೇಟಿ

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಳಿಕ ಬಾಲಿವುಡ್ ಚಿತ್ರರಂಗದತ್ತ ಮುಖ ಮಾಡಿಲ್ಲ. ಅದರೂ ಅವರ ಹೋಂ ಪ್ರೊಡಕ್ಷನ್ ನಲ್ಲಿ ಕೆಲ ಪ್ರಾದೇಶಿಕ ಚಿತ್ರಗಳು ನಿರ್ಮಾಣವಾಗಿದ್ದು, ಈ ಕಾರಣಕ್ಕಾಗಿ ಪ್ರಿಯಾಂಕಾ ಪದೇ ಪದೇ ಭೇಟಿ ನೀಡುತ್ತಿರುತ್ತಾರೆ.

ಬಾಲಿವುಡ್ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳುವ ಹಂಬಲ ಹೊಂದಿರುವ ಪ್ರಿಯಾಂಕಾ ಚೋಪ್ರಾ ಇದಕ್ಕಾಗಿ ಸೂಕ್ತ ಬ್ಯಾನರ್ ಗಾಗಿ ನಿರೀಕ್ಷಿಸಿದ್ದರು. ಜೊತೆಗೆ ಶೀಘ್ರದಲ್ಲೇ ಬಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸುವುದಾಗಿ ಹೇಳಿದ್ದರು. ರಾಕೇಶ್ ಶರ್ಮಾ ಜೀವನಾಧರಿತ ಚಿತ್ರದಲ್ಲಿ ಅಮೀರ್ ಖಾನ್ ಎದುರು ನಾಯಕಿಯಾಗಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗಿತ್ತಾದರೂ ಈ ಚಿತ್ರದ ನಾಯಕನಾಗಿ ಶಾರೂಕ್ ಆಯ್ಕೆಯಾದ ಬಳಿಕ ಪ್ರಿಯಾಂಕಾ ಚಾನ್ಸ್ ಕೈತಪ್ಪಿ ಹೋಗಿದೆ.

ಇದೀಗ ಸಲ್ಮಾನ್ ಖಾನ್ ರ ಮುಂದಿನ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಪ್ರಿಯಾಂಕಾ, ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ವೇಳೆ ಸಲ್ಮಾನ್ ಖಾನ್ ರ ಮುದ್ದಿನ ತಂಗಿ ಅರ್ಪಿತಾ ಖಾನ್ ಜೊತೆ ಕಾಣಿಸಿಕೊಂಡಿದ್ದಾರೆ. ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಲಿದ್ದರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...