alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಿಯಾಂಕ ಚೋಪ್ರಾ

priya 741

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಇದೇ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಈ ವರ್ಷ ಪ್ರಿಯಾಂಕ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಬೇಕು. ಆಕೆ ಅಭಿನಯಿಸಿದ ‘ಬಾಜಿರಾವ್ ಮಸ್ತಾನಿ’ ಭರ್ಜರಿ ಯಶಸ್ಸು ಕಂಡಿತ್ತು. ಅಮೆರಿಕದಲ್ಲಿ ಧಾರಾವಾಹಿಯೊಂದರಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದರು.

ಇದರೊಂದಿಗೆ ಪ್ರಿಯಾಂಕ ‘ಇನ್ ಕ್ರೆಡಿಬಲ್ ಇಂಡಿಯಾ’ ರಾಯಭಾರಿಯೂ ಆಗುವ ಅವಕಾಶ ಒದಗಿಬಂದಿದೆ. ಅಲ್ಲದೇ, ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ಆಸ್ಕರ್ ವೇದಿಕೆ ಹತ್ತುವ ಅವಕಾಶವೂ ಸಿಕ್ಕಿದೆ. ಹೌದು, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪ್ರಿಯಾಂಕ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಈ ವರ್ಷ ಪದ್ಮಶ್ರೀ ಅವಾರ್ಡ್ ಕೂಡ ಬಂದಿದೆ. ಇಷ್ಟೆಲ್ಲಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಿಯಾಂಕ ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ತಮ್ಮ ಮದುವೆಯ ಬಗ್ಗೆ ಹೇಳಿಕೊಂಡಿರುವ ಪ್ರಿಯಾಂಕ ಚೋಪ್ರಾ, ನನ್ನ ಮದುವೆ ಸದ್ಯದಲ್ಲೇ ನಡೆಯಲಿದೆ. ಆದರೆ, ಅದಕ್ಕೆ ಸರಿಯಾದ ಸಮಯ ಕೂಡಿಬರಬೇಕಿದೆ. ಮತ್ತೊಂದು ವಿಷಯವೆಂದರೆ, ಆ ಸಮಯ ಸದ್ಯದಲ್ಲೇ ಬರಲಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...