alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಾಶಾಳ ಗುಟ್ಟು ಬಟಾಬಯಲು ಮಾಡಿದ ಪ್ರಿಯಾಂಕಾ

priyanka-bipashaಬಾಲಿವುಡ್ ನ ಕೃಷ್ಣ ಸುಂದರಿ ಬಿಪಾಶಾ ಬಸು, ನಟ ಕರಣ್ ಸಿಂಗ್ ಗ್ರೋವರ್ ಜೊತೆ ವಿವಾಹವಾಗಲಿದ್ದಾರೆಂಬ ವದಂತಿ ಚಿತ್ರರಂಗದ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಬಿಪಾಶಾ ಬಸು ಅಥವಾ ಕರಣ್ ಸಿಂಗ್ ಗ್ರೋವರ್ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ಆತ್ಮೀಯ ಗೆಳತಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಇಬ್ಬರಿಗೂ ಮುಂಚಿತವಾಗಿಯೇ ಶುಭ ಹಾರೈಸಿ ಟ್ವೀಟ್ ಮಾಡಿದ್ದು, ಆ ಮೂಲಕ ಇಬ್ಬರೂ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆಂಬ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಇತ್ತೀಚೆಗಷ್ಟೇ ಮಾಧ್ಯಮ ಪ್ರತಿನಿಧಿಗಳು, ನಿಮ್ಮ ಮದುವೆ ಯಾವಾಗ ಎಂದು ಬಿಪಾಶಾ ಬಸುರನ್ನು ಕೇಳಿದಾಗ ಅದು ನೆರವೇರಿದಾಗ ಎಲ್ಲರಿಗೂ ತಿಳಿಯುತ್ತದೆ ಎಂದು ಉತ್ತರಿಸಿದ್ದರು. ಮೂಲಗಳ ಪ್ರಕಾರ ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ವಿವಾಹಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಈಗಾಗಲೇ ಆತ್ಮೀಯರಿಗೆ ಆಮಂತ್ರಣ ಪತ್ರ ನೀಡಲಾಗಿದೆ. ಬಂಗಾಳಿ ಪದ್ದತಿಯಲ್ಲಿ ಈ ವಿವಾಹ ಸಮಾರಂಭ ಬಿಪಾಶಾ ಮನೆಯಲ್ಲಿ ನಡೆಯಲಿದ್ದು, ಬಳಿಕ ಚಿತ್ರರಂಗದ ಗಣ್ಯರಿಗಾಗಿ ಪಂಚತಾರಾ ಹೋಟೆಲ್ ನಲ್ಲಿ ಆರತಕ್ಷತೆ ಸಮಾರಂಭ ನೆರವೇರಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...