alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾಕ್ಕೆ ಶಿಫ್ಟ್ ಆಗ್ತಾರಾ ಪ್ರಿಯಾಂಕಾ ಚೋಪ್ರಾ..?

US PRIYANKA‘ಕ್ವಾಂಟಿಕೋ’ ಮೂಲಕ ಹಾಲಿವುಡ್ ಗೆ ಪಾದಾರ್ಪಣೆ ಮಾಡಿರೋ ಪ್ರಿಯಾಂಕಾಗೆ ಅಲ್ಲಿ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರ್ತಿವೆ. Dwayne Johnson ರ ಬೇವಾಚ್ ನಲ್ಲೂ ಪಿಗ್ಗಿ ಚಾಪ್ಸ್ ಮಿಂಚಲಿದ್ದಾರೆ.

ಅಷ್ಟೇ ಅಲ್ಲ ಈ ವರ್ಷದ ಅಕಾಡಮಿ ಅವಾರ್ಡ್ಸ್ ನಲ್ಲಿ ಆಸ್ಕರ್ ವಿತರಕರ ತಂಡದಲ್ಲೂ ಪ್ರಿಯಾಂಕಾ ಸ್ಥಾನ ಪಡೆದಿದ್ದಾರೆ. ಅದೇನೇ ಇದ್ರೂ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಏನಂದ್ರೆ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್ ಗೆ ಶಿಫ್ಟ್ ಆಗಲಿದ್ದಾರೆ ಅನ್ನೋದು. ಅದು ಕೂಡ 5 ವರ್ಷಗಳ ಕಾಲ. ಕ್ವಾಂಟಿಕೋ ಸೀಸನ್ 2 ಭರ್ಜರಿ ಹಿಟ್ ಆಗಿದ್ದೇ ಆದಲ್ಲಿ ಪ್ರಿಯಾಂಕಾ ಅಮೆರಿಕಕ್ಕೆ ಶಿಫ್ಟ್ ಆಗೋದು ಪಕ್ಕಾ. ಈಗಾಗ್ಲೇ ಅವರು ಲಾಸ್ ಏಂಜಲೀಸ್ ನಲ್ಲಿ ಅಪಾರ್ಟ್ ಮೆಂಟ್ ಒಂದನ್ನ ಖರೀದಿಸಿದ್ದಾರಂತೆ.

ಹಾಗಾಗಿ ಉಳಿದುಕೊಳ್ಳೋದು ದೊಡ್ಡ ಸಮಸ್ಯೆ ಏನಲ್ಲ. ಈಗಾಗ್ಲೇ ಪ್ರಿಯಾಂಕಾ ಪ್ರತಿಭೆಯನ್ನು ಹಾಲಿವುಡ್ ಮಂದಿ ಗುರುತಿಸಿದ್ದಾರೆ, ಅವಕಾಶಗಳು ಕೂಡ ಅರಸಿ ಬರುತ್ತಿವೆ. ಹಾಗಿದ್ಮೇಲೆ 5 ವರ್ಷ ಲಾಸ್ ಏಂಜಲೀಸ್ ನಲ್ಲೇ ಉಳಿದುಕೊಳ್ಳಬಹುದು ಅನ್ನೋ ಲೆಕ್ಕಾಚಾರ ಪ್ರಿಯಾಂಕಾ ಛೋಪ್ರಾ ಅವರದ್ದು. ಆದ್ರೆ ಅಭಿಮಾನಿಗಳಿಗೆ ಮಾತ್ರ ಇದು ಕಹಿ ಸುದ್ದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...