alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಪ್ಪಿಯನ್ನು ಎಂಗೇಜ್ಮೆಂಟ್ ಪಾರ್ಟಿಯಿಂದ ಹೊರಗಿಟ್ಟಳಾ ಪಿಗ್ಗಿ?

ಬಾಲಿವುಡ್ ಹಿರೋಯಿನ್ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ನ ಗಾಯಕ, ನಟ ನಿಕ್ ಜೋನಾಸ್ ಅವರ ವಿವಾಹ ನಿಶ್ಚಿತಾರ್ಥ ಕೊನೆಗೂ ನೆರವೇರಿದೆ. ಇಷ್ಟು ದಿನ ಏನನ್ನೂ ಹೇಳದೆ ಸುಮ್ಮನಿದ್ದ ನಿಕ್ ಮತ್ತು ಪ್ರಿಯಾಂಕ ಈಗ ತಮ್ಮ ಸಂಬಂಧವನ್ನ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಆಗಸ್ಟ್ 19ರಂದು ಪ್ರಿಯಾಂಕ ಮತ್ತು ನಿಕ್ ಜೋನಾಸ್ ವಿವಾಹ ನಿಶ್ಚಿತಾರ್ಥದ ಕಾರ್ಯ ನೆರವೇರಿದೆ.

ಈ ಸಂದರ್ಭದಲ್ಲಿ ಪ್ರಿಯಾಂಕ ತಮ್ಮ ಕೆಲ ಆಪ್ತರನ್ನಷ್ಟೇ ಆಹ್ವಾನಿಸಿದ್ದಾರೆ. ನಟಿ ಅಲಿಯಾ ಭಟ್, ಸೋದರ ಸಂಬಂಧಿ ಪರಿಣಿತಿ ಚೋಪ್ರಾ ಪ್ರಿಯಾಂಕ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ನಟ ರಣ್ವೀರ್ ಸಿಂಗ್ ಅವರಿಗೂ ಪ್ರಿಯಾಂಕ ಆಹ್ವಾನ ನೀಡಿದ್ದರಂತೆ. ಆದ್ರೆ ರಣ್ವೀರ್ ಸಿಂಗ್ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ಬಿ ಟೌನ್ ನಲ್ಲಿ ಸದ್ಯ ಹರಿದಾಡ್ತಿರೋ ಮಾಹಿತಿಯ ಪ್ರಕಾರ ಪ್ರಿಯಾಂಕ ಈ ಕಾರ್ಯಕ್ರಮಕ್ಕೆ ಕೇವಲ ರಣ್ವೀರ್ ಸಿಂಗ್ ಗೆ ಮಾತ್ರ ಆಹ್ವಾನ ನೀಡಿದ್ದರಂತೆ. ದೀಪಿಕಾ ಪಡುಕೋಣೆ ಅವರನ್ನ ಪ್ರಿಯಾಂಕ ತಮ್ಮ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲವಂತೆ. ದೀಪಿಕಾಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನಲೆಯಲ್ಲಿ ರಣ್ವೀರ್ ಕೂಡ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತ ಹೇಳಲಾಗ್ತಿದೆ.

ಹಾಗೆ ನೋಡಿದ್ರೆ ದೀಪಿಕಾ ಮತ್ತು ಪ್ರಿಯಾಂಕ ನಡುವೆ ಉತ್ತಮ ಗೆಳೆತನವಿತ್ತು. ಇಬ್ಬರು 2015 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ರಣ್ವೀರ್ ಮತ್ತು ದೀಪಿಕಾ ಕೂಡ ಬಾಲಿವುಡ್ ನ ಪ್ರೇಮ ಪಕ್ಷಿಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.
ಆದ್ರೆ ದೀಪಿಕಾರನ್ನ ತಮ್ಮ ಗೆಸ್ಟ್ ಲಿಸ್ಟ್ ನಿಂದ ಪ್ರಿಯಾಂಕ ಹೊರಗಿಟ್ಟಿದ್ದೇಕೆ…? ಅವರಿಬ್ಬರ ಮಧ್ಯೆ ಏನಾದ್ರು ಮನಸ್ತಾಪ ನಡೆದಿದ್ಯಾ..? ದೀಪಿಕಾರನ್ನ ಪ್ರಿಯಾಂಕ ಏಕೆ ಆಹ್ವಾನಿಸಲಿಲ್ಲ ಅನ್ನೋ ಭಾರೀ ಚರ್ಚೆಗಳು ಈಗ ಬಿಟೌನ್ ತುಂಬೆಲ್ಲಾ ನಡೆಯುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...