alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಿಯಕರನ ಜಾಕೆಟ್ ಧರಿಸ್ತಾಳಂತೆ ಪಿಗ್ಗಿ..!

priyanka_chopra_1024_1495869691_749x421

ನಟಿ ಪ್ರಿಯಾಂಕ ಚೋಪ್ರಾ ಲಾರಾ ಬ್ರೌನ್ ನಡೆಸಿಕೊಡುವ ಅಮೆರಿಕಾದ ಡರ್ಟಿ ಲಾಂಡ್ರಿ ಶೋನಲ್ಲಿ ಪಾಲ್ಗೊಂಡಿದ್ದಳು. ಶೋನಲ್ಲಿ ಸಾಕಷ್ಟು ವಿಷಯಗಳನ್ನು ಪ್ರಿಯಾಂಕ ಹೇಳಿಕೊಂಡಿದ್ದಾಳೆ. ತಾನು ಧರಿಸುವ ಜಾಕೆಟ್ ಬಗ್ಗೆಯೂ ಪ್ರಿಯಾಂಕ ಹೇಳಿದ್ದಾಳೆ.

ವಾಸ್ತವವಾಗಿ ಪ್ರಿಯಾಂಕ ಧರಿಸುವ ಜಾಕೆಟ್ ಒಂದು ಆಕೆಯದಲ್ಲವಂತೆ. ಆಕೆಯ ಮಾಜಿ ಪ್ರಿಯಕರನದ್ದಂತೆ. ಆತ ಮನೆಯಲ್ಲಿ ಬಿಟ್ಟು ಹೋಗಿದ್ದ. ನನಗೆ ಆ ಜಾಕೆಟ್ ತುಂಬಾ ಇಷ್ಟವಾಯ್ತು. ಹಾಗಾಗಿ ಬ್ರೇಕ್ ಅಪ್ ನಂತ್ರವೂ ಆತನಿಗೆ ವಾಪಸ್ ನೀಡಿಲ್ಲ ಎಂದು ಪಿಗ್ಗಿ ಹೇಳಿದ್ದಾಳೆ. ತನ್ನ ಮೊದಲ ಡೇಟಿಂಗ್ ವಿಷಯವನ್ನೂ ಶೋನಲ್ಲಿ ಹೇಳಿದ್ದಾಳೆ ಪಿಗ್ಗಿ.

ಭಾರತದಿಂದ ಅಮೆರಿಕಾಕ್ಕೆ ಹೋದ್ರೂ ದೇವರನ್ನು ಮರೆತಿಲ್ಲವಂತೆ. ಸದಾ ತನ್ನ ಜೊತೆ ಕೆಲ ದೇವರ ಮೂರ್ತಿಗಳನ್ನು ತೆಗೆದುಕೊಂಡು ಹೋಗ್ತಾಳಂತೆ ಪ್ರಿಯಾಂಕ. ಇಷ್ಟೇ ಅಲ್ಲ ಈಕೆ ಪರ್ಸ್ ನಲ್ಲೊಂದು ಕೈವಸ್ತ್ರದಂತೆ ಕಾಣುವ ಪಾಶ್ಮಿನಾ ಶಾಲ್ ಇರುತ್ತದೆಯಂತೆ. ಹಾಗೆ ಬಟ್ಟೆ ಖರೀದಿ ಮಾಡುವ ವೇಳೆ ಮಕ್ಕಳ ಸೆಕ್ಷನ್ ಗೆ ಜಾಸ್ತಿ ಹೋಗ್ತೇನೆ ಎಂದಿದ್ದಾಳೆ ಬೆಡಗಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...