alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ನಲ್ಲಿ ಗಳಿಕೆ ಹೆಚ್ಚಾಗ್ತಿದ್ದಂತೆ ಬಾಲಿವುಡ್ ಗೆ ಬೈ ಹೇಳ್ತಿದ್ದಾಳೆ ನಟಿ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗ್ಲೋಬಲ್ ನಟಿಯಾಗಿದ್ದಾಳೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾಳೆ. ಹಾಲಿವುಡ್ ನಲ್ಲಿ ಒಂದಾದ ಮೇಲೆ ಒಂದು ಆಫರ್ ಪಿಗ್ಗಿಗೆ ಬರ್ತಿದೆ. ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳ ಜೊತೆ ಪ್ರಿಯಾಂಕ ಶಾಂಪೂ ಸೇರಿದಂತೆ ಅನೇಕ ವಸ್ತುಗಳ ರಾಯಭಾರಿಯೂ ಹೌದು. ಇದ್ರಿಂದಲೂ ಸಿಗ್ತಿರುವ ಸಂಬಳ ಪ್ರಿಯಾಂಕ ಗಳಿಕೆಯನ್ನು ಡಬಲ್ ಮಾಡಿದೆ.

ವಿದೇಶದಲ್ಲಿ ಪ್ರಿಯಾಂಕ ಗಳಿಕೆಯೊಂದನ್ನೇ ಗಮನಿಸೋದಾದ್ರೆ ಪ್ರಿಯಾಂಕ 2017 ರಲ್ಲಿ 11 ಮಿಲಿಯನ್ ಅಮೆರಿಕನ್ ಡಾಲರ್ ( ಸುಮಾರು 77 ಕೋಟಿ ರೂ.) ಗಳಿಕೆ ಕಂಡಿದ್ದಾಳೆ. ಕಾರಿನ ನಂತ್ರ ಮನೆ ಖರೀದಿಗೆ ಪ್ರಿಯಾಂಕ 8 ಮಿಲಿಯನ್ ಡಾಲರ್ (56 ಕೋಟಿ ರೂ.) ನೀಡಿದ್ದಾಳೆ.

2015ರಲ್ಲಿ ಪ್ರಿಯಾಂಕ ಮೊದಲ ಬಾರಿ ಹಾಲಿವುಡ್ ಪ್ರವೇಶ ಮಾಡಿದ್ದಳು. ಪ್ರಿಯಾಂಕಾಗೆ ಕ್ವಾಂಟಿಕೊ ಮೂಲಕ ಜನಪ್ರಿಯತೆ ಸಿಕ್ಕಿತ್ತು. ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಳು ಪ್ರಿಯಾಂಕ. 2017ರಲ್ಲಿ BayWatch ಚಿತ್ರದಲ್ಲಿ ಪ್ರಿಯಾಂಕ ನಟಿಸಿದ್ದಾಳೆ. ಆದ್ರೆ ಅದಕ್ಕೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ. ಆದ್ರೆ ಪ್ರಿಯಾಂಕ ನಟನೆಗೆ ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...