alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ರಸ್ತೆಯಲ್ಲಿ ಸ್ಟೆಪ್ ಹಾಕಿದ ಪಿಗ್ಗಿ

ಬಾಲಿವುಡ್ ಸಿನಿಮಾ ಭಾರತ್ ಚಿತ್ರೀಕರಣಕ್ಕಿಂತ ಮೊದಲು ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲು ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್ ಗೆ ಹೋಗಿದ್ದಾಳೆ. ಪ್ರಿಯಾಂಕ Isn’t It Romantic ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಪ್ರಿಯಾಂಕ ಹಾಲಿವುಡ್ ಸ್ಟಾರ್ ಲಿಯಾಮ್ ಹೆಮ್ಟ್ ವರ್ತ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾಳೆ.

ಚಿತ್ರದ ಕೊನೆ ಭಾಗ ನ್ಯೂಯಾರ್ಕ್ ನಲ್ಲಿ ಚಿತ್ರೀಕರಣಗೊಂಡಿದೆ. ನ್ಯೂಯಾರ್ಕ್ ರಸ್ತೆಯಲ್ಲಿ ಹಾಡೊಂದರ ಚಿತ್ರೀಕರಣ ನಡೆಯಿತು. ಇದ್ರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಪ್ರಿಯಾಂಕ ಡಾನ್ಸ್ ಮಾಡ್ತಿದ್ದಾಳೆ. ಹಾಲಿವುಡ್ ಹಾಡನ್ನು ಪ್ರಿಯಾಂಕ ಎಂಜಾಯ್ ಮಾಡ್ತಿದ್ದಾಳೆಂಬುದು ಫೋಟೋ ನೋಡಿದ್ರೆ ಸ್ಪಷ್ಟವಾಗುತ್ತೆ.

2016ರ ನಂತ್ರ ಪ್ರಿಯಾಂಕ ಯಾವುದೇ ಬಾಲಿವುಡ್ ಚಿತ್ರದಲ್ಲಿ ನಟಿಸಿಲ್ಲ. ಹಾಲಿವುಡ್ ನಲ್ಲಿ ಎರಡು ಚಿತ್ರ ಹಾಗೂ ರಿಯಾಲಿಟಿ ಶೋನಲ್ಲಿ ಪಿಗ್ಗಿ ಬ್ಯುಸಿಯಾಗಿದ್ದಳು. 2016ರಲ್ಲಿ ಪ್ರಿಯಾಂಕ ಜೈ ಗಂಗಾಜಲ್ ಚಿತ್ರದಲ್ಲಿ ನಟಿಸಿದ್ದಳು. ಈಗ ಸಲ್ಮಾನ್ ಖಾನ್ ಜೊತೆ ಭಾರತ್ ಚಿತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾಳೆ. ಶೀಘ್ರವೇ ಶೂಟಿಂಗ್ ಶುರುವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...