alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಚೋಪ್ರಾ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಗೊತ್ತಾ?

priya 11

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿರುವ ಅವರು ‘ಮೇರಿಕೋಮ್’ನಲ್ಲಿ ಬಾಕ್ಸರ್ ಆಗಿ ಮಿಂಚಿದ್ದರು. ಇದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಇದೀಗ ಅವರು ‘ಜೈ ಗಂಗಾಜಲ್’ನಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಜೈ ಗಂಗಾಜಲ್’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಿಯಾಂಕ ಸಾಹಸ ದೃಶ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಎದುರಾಳಿಯ ಹಣೆಗೆ ಕಿಕ್ ಮಾಡಬೇಕಿತ್ತು. ಆದರೆ, ಯಡವಟ್ಟಾಗಿ ಆತನ ಕುತ್ತಿಗೆಗೆ ಹೊಡೆದಿದ್ದಾರೆ. ಆ ಸಾಹಸ ಕಲಾವಿದನಿಗೆ ಭಾರೀ ಪೆಟ್ಟಾಗಿ ಸೆಟ್ ನಲ್ಲಿ ಕೆಲಕಾಲ ಆತಂಕ ಮೂಡಿತ್ತು. ಈ ವೇಳೆ ಪ್ರಿಯಾಂಕ ನನ್ನಿಂದಾಗಿಯೇ ಆ ಸಾಹಸ ಕಲಾವಿದ ಪೆಟ್ಟು ತಿನ್ನಬೇಕಾಯಿತೆಂದು ಬೇಜಾರಾಗಿ ಗಳಗಳನೆ ಅತ್ತಿದ್ದಾರೆ. ಕೊನೆಗೆ ಚಿತ್ರತಂಡದವರು ಸಮಾಧಾನ ಮಾಡಿದ್ದಾರೆ.

ಈಗಾಗಲೇ ‘ಜೈ ಗಂಗಾಜಲ್’ ಟ್ರೇಲರ್ ಹಾಗೂ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದು, ರಿಯಾಲಿಸ್ಟಿಕ್ ಆಗಿ ಮೂಡಿಬಂದಿರುವ ದೃಶ್ಯಗಳು ನೋಡುಗರನ್ನು ಇಂಪ್ರೆಸ್ ಮಾಡುತ್ತವೆ. ಪ್ರಿಯಾಂಕ ಖಾಕಿ ತೊಟ್ಟು ಕಮಾಲ್ ಮಾಡಿದ್ದಾರೆ. ‘ಗಂಗಾಜಲ್’ ಹಿಂದೆ ಸಂಚಲನ ಸೃಷ್ಠಿಸಿದ ರೀತಿಯಲ್ಲೇ, ‘ಜೈ ಗಂಗಾಜಲ್’ ಕೂಡ ಭರ್ಜರಿ ಹವಾ ಸೃಷ್ಠಿಸಲಿದೆ ಎಂಬ ನಿರೀಕ್ಷೆ ಚಿತ್ರ ತಂಡಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...