alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಗೆ ಸಿಕ್ತು ಆಸ್ಕರ್ ವೇದಿಕೆ ಹತ್ತುವ ಅವಕಾಶ

priyanka dfg

ವಿಶ್ವ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಆಸ್ಕರ್ ಅವಾರ್ಡ್ ಪ್ರದಾನ ಸಮಾರಂಭಕ್ಕೆ ಅತಿಥಿಯಾಗುವುದೆಂದರೆ ಸುಮ್ಮನೆ ಮಾತಾ. ಅಂತಹ ಅವಕಾಶವನ್ನು ಗಿಟ್ಟಿಸಿದ್ದಾರೆ ಬಾಲಿವುಡ್ ಬೆಡಗಿ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಿದ್ದಾರೆ.

ಹೀಗೆ ಆಸ್ಕರ್ ಪ್ರಶಸ್ತಿ ವಿಜೇತರಿಗೆ ಬಹುಮಾನ ನೀಡಲಿರುವುದು ಬೇರಾರು ಅಲ್ಲ, ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಪ್ರಿಯಾಂಕ ಈಗಾಗಲೇ ಅಮೆರಿಕದ ಧಾರಾವಾಹಿಯೊಂದರಲ್ಲಿ ನಟಿಸಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಅವರಿಗೆ ವಿಶ್ವ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನ ಸಿಕ್ಕಿದೆ. ಈ ರೀತಿ ವಿಜೇತರಿಗೆ ಬಹುಮಾನ ವಿತರಿಸುವ ಅವಕಾಶ ದೊರೆತ ಮೊದಲ ಬಾಲಿವುಡ್ ಬೆಡಗಿ ಪ್ರಿಯಾಂಕ.

ಹಾಲಿವುಡ್ ಸಿನಿಮಾರಂಗದ ಘಟಾನುಘಟಿ ಕಲಾವಿದರಾದ ಜೇರ್ಡ್ ಲೆಟೋ, ರೀಸೆ ವಿಥೇರ್, ಆಂಡರ್ಸನ್, ಜೂಲಿಯಾನ್, ಚಾರ್ಲಿಜ್ ಸೇರಿದಂತೆ ಹಲವು ಖ್ಯಾತ ನಾಮರೊಂದಿಗೆ ಪ್ರಿಯಾಂಕ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿರೂಪಣೆ ಕೂಡ ಮಾಡಲಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...