alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಚೋಪ್ರಾಗೆ ಪುರುಷ ಏಕೆ ಬೇಕಂತೆ ಗೊತ್ತಾ..?

priyanka_childredn

ಪ್ರಿಯಾಂಕ ಚೋಪ್ರಾ ಬಹು ಬೇಡಿಕೆಯ ನಟಿ. ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹೆಸರು ಮಾಡಿದ ಬೆಡಗಿ. ಯಾರ ನೆರವಿನ ಅವಶ್ಯಕತೆಯೂ ಇಲ್ಲದಷ್ಟು ಎತ್ತರಕ್ಕೇರಿದ್ದಾಳೆ ಪ್ರಿಯಾಂಕ. ಆದ್ರೆ ಒಂದು ವಿಷಯಕ್ಕೆ ಮಾತ್ರ ಪ್ರಿಯಾಂಕಾಗೆ ಪುರುಷರ ಸಹಾಯ ಬೇಕಂತೆ.

ಪತ್ರಿಕೆಯೊಂದರ ಸಂದರ್ಶನದ ವೇಳೆ ಪ್ರಿಯಾಂಕ ನೇರವಾಗಿ ಉತ್ತರ ನೀಡಿದ್ದಾಳೆ. ಸಂದರ್ಶನದ ವೇಳೆ ಉಂಗುರ ತೊಟ್ಟು ಬಂದಿದ್ದಳು ಪಿಗ್ಗಿ. ಈ ವೇಳೆ ನಿಮ್ಮ ಜೀವನದಲ್ಲಿ ಬಾಯ್ ಫ್ರೆಂಡ್ ಪ್ರವೇಶವಾಗಿದೆಯಾ ಎಂದು ಕೇಳಲಾಯ್ತು. ಇದಕ್ಕೆ ಉತ್ತರ ನೀಡಿದ ಪ್ರಿಯಾಂಕ, ಉಂಗುರ ಖರೀದಿಸಲು ಪುರುಷನ ಅವಶ್ಯಕತೆ ಇಲ್ಲ ಎಂದಿದ್ದಾಳೆ. ಒಂದು ವೇಳೆ ನನ್ನ ಜೀವನದಲ್ಲಿ ಪುರುಷನ ಪ್ರವೇಶವಾದ್ರೆ ನಾನೇ ಡೈಮಂಡ್ ರಿಂಗ್ ಖರೀದಿಸಿ ತೊಟ್ಟುಕೊಳ್ಳುತ್ತೇನೆ ಎಂದಿದ್ದಾಳೆ.

ಇಷ್ಟೆ ಅಲ್ಲ, ಮಕ್ಕಳನ್ನು ಪಡೆಯಲು ಮಾತ್ರ ನನಗೆ ಪುರುಷನ ಅವಶ್ಯಕತೆ ಇದೆ ಎಂದಿದ್ದಾಳೆ ಪ್ರಿಯಾಂಕ. ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ನಟಿ, ಇದರಿಂದ ಖುಷಿಯಾಗಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...