alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನವೇ ಪ್ರಿಯಾಂಕಾಗೆ ಸಿಗ್ತು ಸಂತಾನ ಪ್ರಾಪ್ತಿ ಆಶೀರ್ವಾದ

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮದುವೆ ವಿಚಾರ ದೇಶದಲ್ಲೊಂದೇ ಅಲ್ಲ ಅಮೆರಿಕಾದಲ್ಲೂ ಬಿಸಿ ಬಿಸಿ ಚರ್ಚೆಯಾಗ್ತಿದೆ. ಅಮೆರಿಕಾ ಮಾಧ್ಯಮಗಳು ಪ್ರಿಯಾಂಕ ಹಾಗೂ ನಿಕ್ ಜೋನಸ್ ಮದುವೆ ಬಗ್ಗೆ ವರದಿ ಮಾಡ್ತಿವೆ. ಜುಲೈ 18ರಂದು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಆಗಸ್ಟ್ ನಲ್ಲಿ ದಾಂಪತ್ಯಕ್ಕೆ ಕಾಲಿಡಲಿದೆ ಎಂಬ ಸುದ್ದಿಯಿತ್ತು. ಆದ್ರೀಗ ಸೆಪ್ಟೆಂಬರ್ 16ರಂದು ನಿಕ್ ಹುಟ್ಟುಹಬ್ಬದ ದಿನ ಇಬ್ಬರೂ ಮದುವೆಯಾಗ್ತಾರೆಂಬ ಸುದ್ದಿ ಹರಿದಾಡ್ತಿದೆ.

ಈ ಮಧ್ಯೆ ಪ್ರಿಯಾಂಕ ಸ್ನೇಹಿತೆ ಹಾಗೂ ಇಂಗ್ಲೆಂಡ್ ನ ರಾಜಮನೆತನದ ಸೊಸೆ ಮೇಗನ್ ಮಾರ್ಕೆಲ್, ಪ್ರಿಯಾಂಕ-ನಿಕ್ ಗೆ ಶುಭ ಕೋರಿದ್ದಾರೆ. ಆದಷ್ಟು ಬೇಗ ಸುಂದರ ಹಾಗೂ ಬುದ್ಧಿವಂತ ಮಗುವಿಗೆ ಜನ್ಮ ನೀಡಲಿ ಎಂದಿದ್ದಾರೆ. ಪ್ರಿಯಾಂಕ-ನಿಕ್ ಮದುವೆ ಬಗ್ಗೆ ಮೇಗನ್ ತುಂಬಾ ಉತ್ಸಾಹಿತರಾಗಿದ್ದಾರೆ. ಪ್ರಿಯಾಂಕ ಅಮೇಜಿಂಗ್ ವ್ಯಕ್ತಿ. ಪ್ರಿಯಾಂಕಾಗೆ ನಿಕ್ ಉತ್ತಮ ಜೋಡಿ ಎಂದಿದ್ದಾರೆ.

ಮೇಗನ್, ಪ್ರಿಯಾಂಕರ ಬೆಸ್ಟ್ ಫ್ರೆಂಡ್. ಮೇಗನ್ ಹಾಗೂ ರಾಜಕುಮಾರ ಹ್ಯಾರಿ ಮದುವೆಗೆ ಪ್ರಿಯಾಂಕ ಹೋಗಿದ್ದರು. ಪ್ರಿಯಾಂಕ ಹಾಗೂ ನಿಕ್ ವಾರದ ಹಿಂದೆ ಮೇಗನ್ ಮನೆಗೆ ಹೋಗಿದ್ದರಂತೆ. ಹ್ಯಾರಿ-ಮೇಗನ್ ಗೆ ನಿಕ್ ಪರಿಚಯಿಸಿದ ಪ್ರಿಯಾಂಕ ಕೆಲ ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕ ಮದುವೆ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಆದಷ್ಟು ಬೇಗ ದಿನಾಂಕ ಫೈನಲ್ ಮಾಡುವುದಾಗಿ ಪ್ರಿಯಾಂಕ ಚಿಕ್ಕಮ್ಮ ಹೇಳಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...