alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಾಶ್ ಅಂಬಾನಿ-ಶ್ಲೋಕಾ ಮೆಹಂದಿ ಪಾರ್ಟಿಗೆ ನಿಕ್ ಜೊತೆ ಬಂದ ಪಿಗ್ಗಿ

ಗೋವಾ ಪ್ರವಾಸ ಮುಗಿಸಿ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಮುಂಬೈಗೆ ಬುಧವಾರ ಬೆಳಿಗ್ಗೆ ವಾಪಸ್ ಆಗಿದ್ದಾರೆ. ಬುಧವಾರ ಸಂಜೆ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾರ ಎಂಗೇಜ್ಮೆಂಟ್ ಪೂರ್ವದ ಮೆಹಂದಿ ಕಾರ್ಯಕ್ರಮದಲ್ಲಿ ಬಾಯ್ ಫ್ರೆಂಡ್ ಜೊತೆ ಪ್ರಿಯಾಂಕ ಕಾಣಿಸಿಕೊಂಡಿದ್ದಾಳೆ.

ಅನಿಲ್ ಅಂಬಾನಿ ಮಗ ಆಕಾಶ್ ಅಂಬಾನಿ ಹಾಗೂ ಉದ್ಯಮಿ ಮಗಳು ಶ್ಲೋಕಾ ಮೆಹ್ತಾ ಉಂಗುರ ಬದಲಿಸಿಕೊಳ್ಳಲಿದ್ದಾರೆ. ಇದೇ ಜೂನ್ 30 ರಂದು ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಲಿದೆ. ಅಂಬಾನಿ ಮನೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ದಿಗ್ಗಜರ ದಂಡೇ ಆಗಮಿಸಲಿದೆ. ಇದಕ್ಕೂ ಮುನ್ನ ಬುಧವಾರ ಎಂಗೇಜ್ಮೆಂಟ್ ಪೂರ್ವ ಮೆಹಂದಿ ಕಾರ್ಯಕ್ರಮ ನಡೆಯಿತು.

ಸಮಾರಂಭಕ್ಕೆ ಬಾಯ್ ಫ್ರೆಂಡ್ ನಿಕ್ ಜೋನಸ್ ಹಾಗೂ ತಾಯಿ ಜೊತೆ ಪ್ರಿಯಾಂಕ ಬಂದಿದ್ದಳು. ಆಕಾಶ್ ಹಾಗೂ ಶ್ಲೋಕಾ ಜೊತೆಗಿರುವ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿರುವ ಪ್ರಿಯಾಂಕ ನವ ಜೋಡಿಗೆ ಶುಭ ಕೋರಿದ್ದಾಳೆ. ಮೆಹಂದಿ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ಎಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...