alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಜೊತೆ ಮದುವೆ ಕನಸು ಕಾಣ್ತಿದ್ದಾನೆ ನಿಕ್

ಪ್ರಿಯಾಂಕ ಚೋಪ್ರಾ ಕೆಲಸಕ್ಕಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗ್ತಿದ್ದಾಳೆ. ಪ್ರಿಯಾಂಕ ಪ್ರೀತಿ ವಿಚಾರ ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಬಿಸಿ ಬಿಸಿ ಚರ್ಚೆಯ ವಿಷ್ಯವಾಗಿದೆ. ಪ್ರಿಯಾಂಕ ಹಾಡುಗಾರ ನಿಕ್ ಜೋನಸ್ ಜೊತೆ ತುಂಬಾ ಸಮಯ ಕಳೆಯುತ್ತಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಅನೇಕ ಫೋಟೋಗಳು ವೈರಲ್ ಆಗಿವೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆಂಬುದು ಹಳೆ ವಿಷ್ಯವಾಯ್ತು. ಈಗ ಮಾಧ್ಯಮಗಳಲ್ಲಿ ಮತ್ತೊಂದು ವಿಷ್ಯ ಹರಿದಾಡ್ತಿದೆ. ದೇಸಿ ಗರ್ಲ್ ಪ್ರಿಯಾಂಕಾ ಪ್ರೀತಿಯಲ್ಲಿ ಬಿದ್ದು ನಿಕ್ ಒದ್ದಾಡುತ್ತಿದ್ದಾನಂತೆ. ಸಂಬಂಧವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾನಂತೆ. ಪ್ರಿಯಾಂಕಾಳನ್ನು ಮದುವೆಯಾಗುವ ಕನಸು ಕಾಣ್ತಿದ್ದಾನಂತೆ ನಿಕ್.

ಕೆಲ ದಿನಗಳ ಹಿಂದೆ ಪ್ರಿಯಾಂಕ ತಾಯಿ ಈ ಸುದ್ದಿ ಸುಳ್ಳು ಎಂದಿದ್ದರು. ಆದ್ರೆ ಯುಎಸ್ ಡೈಲಿ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ. ಇಬ್ಬರೂ ಪರಸ್ಪರ ಆಸಕ್ತಿ ಹೊಂದಿದ್ದಾರೆಂದು ವರದಿ ಪ್ರಸಾರ ಮಾಡಿದೆ.

ನಿಕ್ ಜೋನಸ್, ಪ್ರಿಯಾಂಕಾಗಿಂತ 10 ವರ್ಷ ಚಿಕ್ಕವನು. ಪ್ರಿಯಾಂಕ ಶೀಘ್ರವೇ 36ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾಳೆ. ನಿಕ್ ಕೆಲ ದಿನಗಳ ಹಿಂದಷ್ಟೇ 26ನೇ ವಸಂತಕ್ಕೆ ಕಾಲಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...