alex Certify
ಕನ್ನಡ ದುನಿಯಾ       Mobile App
       

Kannada Duniya

ಮುಚ್ಚಿಟ್ಟ ವಿಷಯಗಳಿಗೆಲ್ಲಾ ತೆರೆ ಎಳೆದ್ರಾ ಪ್ರಿಯಾಂಕಾ…?

ಬಾಲಿವುಡ್ ನಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರೋದು ನಟಿ ಪ್ರಿಯಾಂಕ ಚೋಪ್ರಾ -ನಿಕ್ ಜೋನಾಸ್. ಪಿಗ್ಗಿ ಮತ್ತು ನಿಕ್ ಮದುವೆಯಾಗ್ತಾರೆ, ಇಬ್ಬರು ನಡುವೆ ಏನೋ ನಡೀತಿದೆ ಅನ್ನೋ ಗುಸುಗುಸು ಬಾಲಿವುಡ್ ತುಂಬೆಲ್ಲಾ ಹರಡಿಬಿಟ್ಟಿವೆ.

ಆದ್ರೆ ಈ ಬಗ್ಗೆ ನಿಕ್ ಆಗ್ಲಿ ಅಥವಾ ಪ್ರಿಯಾಂಕಾ ಆಗ್ಲಿ ಸ್ಪಷ್ಟನೆ ನೀಡಿಲ್ಲ. ಆದ್ರೆ ಶುಕ್ರವಾರ ಮುಂಜಾನೆ ಮುಂಬೈನ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಪಿಗ್ಗಿ ಮತ್ತು ನಿಕ್ ಎಲ್ಲರ ಅನುಮಾನಗಳಿಗೂ ತೆರೆ ಎಳೆಯುವ ಹಾಗೆ ನಡೆದುಕೊಂಡಿದ್ದಾರೆ.

ಇಷ್ಟು ದಿನ ಮಾಧ್ಯಮಗಳನ್ನ ಅವಾಯ್ಡ್ ಮಾಡಿದ್ದ ಈ ಜೋಡಿ ಶುಕ್ರವಾರ ನಸುಕಿನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತಕ್ಷವಾಯ್ತು. ಇಬ್ಬರು ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಹೆಜ್ಜೆ ಹಾಕ್ತಿದ್ದರು. ಇಷ್ಟು ದಿನ ಎಲ್ಲವನ್ನು ಅವಾಯ್ಡ್ ಮಾಡ್ತಿದ್ದ ಪ್ರಿಯಾಂಕಾ ಈ ಬಾರಿ ಹಾಗೆ ನಡೆದುಕೊಳ್ಳಲಿಲ್ಲ. ಬದಲಾಗಿ ಆರಾಮಾಗಿ ಕ್ಯಾಮರಾಗೆ ಫೋಸ್ ನೀಡುತ್ತಾ ನಿಕ್ ಜೊತೆ ಮುಂದೆ ಸಾಗಿದ್ರು.

ಬಹುಶಃ ಮೌನಂ ಸಮ್ಮತಿ ಲಕ್ಷಣಂ ಅನ್ನೋ ಸೂತ್ರವನ್ನ ಪ್ರಿಯಾಂಕ ಅನುಸರಿಸ್ತಿರೋ ಹಾಗಿದೆ. ಮೂಲಗಳ ಪ್ರಕಾರ ಪಿಗ್ಗಿ ಮತ್ತು ನಿಕ್ ಜೋಡಿ ಗೋವಾಗೆ ಪ್ರಯಾಣ ಬೆಳಸಿದೆ ಅಂತ ಹೇಳಲಾಗ್ತಿದೆ. ಶೀಘ್ರದಲ್ಲೇ ಪಿಗ್ಗಿ-ನಿಕ್ ವಿವಾಹ ನಡೆಯಲಿದೆ ಅನ್ನೋ ಸುದ್ದಿ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...